ಮಹಿಳೆ ಎಂದರೇ ಅಡುಗೆ ಮನೆಯಿಂದ ಎಲ್ಲಾ ಕೆಲಸಕ್ಕೂ ಸೈ…ಶಾಂತಲಾ ನಾರಿ ಶಕ್ತಿ ಸಂಗಮದಲ್ಲಿ ತೇಜಸ್ವಿನಿ ಅನಂತಕುಮಾರ್ ಬಣ್ಣನೆ

ಹಾಸನ: ಪ್ರಸ್ತುತದಲ್ಲಿ ಮಹಿಳೆ ಎಂದರೇ ಕೇವಲ ಅಡುಗೆ ಮನೆಗೆ ಮಾತ್ರ ಸೀಮಿತವಾಗಿಲ್ಲ. ಜೊತೆಯಲ್ಲಿ ಪುರುಷರಂತೆ ಎಲ್ಲಾ ಕ್ಷೇತ್ರಗಳಲ್ಲೂ ಕೆಲಸಕ್ಕೆ ಸೈ ಎನಿಸಿಕೊಂಡಿದ್ದಾಳೆ ಎಂದು ಅದಮ್ಯ ಚೇತನ ಫೌಂಡೇಷನ್ ಸಂಸ್ಥಾಪಕಿ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್ ಬಣ್ಣಿಸಿದರು.

ನಗರದ ಸಾಲಗಾಮೆ ರಸ್ತೆ ಬಳಿ ಇರುವ ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಮಹಿಳಾ ಸಮನ್ವಯ ಸಮಾವೇಶವನ್ನು ರಾಷ್ಟ್ರೋದಯ ಸೇವಾ ಚಾರಿಟಬಲ್ ಟ್ರಸ್ಟ್ ಇವರ ಸಹಯೋಗದಲ್ಲಿ ಭಾನುವಾರದಂದು ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಶಾಂತಲಾ ನಾರಿ ಶಕ್ತಿ ಸಂಗಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,

ಯಾವುದೇ ಒಂದು ಕೆಲಸ ಆಗಬೇಕಾದರೇ ಪ್ರಭುತ್ವ, ಸಂದರ್ಭ, ಅನುಭವ ಈ ಮೂರು ಸಂಗತಿಗಳು ಅವಶ್ಯಕ. ಭಾರತದ ಪರಂಪರೇಯ ಪ್ರಪಂಚಕ್ಕೆ ನಾವು ತಿಳಿಸುತ್ತಿದ್ದೇವೆ. ಬಹಳಷ್ಟು ನಾಗರೀಕತೆಗಳನ್ನು ಕೇಳಿದ್ದು, ಪ್ರಸ್ತೂತ ಅದನ್ನ ನೋಡಲು ಸಂಗ್ರಾಲಯಕ್ಕೆ ಹೋಗಬೇಕು. ಭಾರತೀಯ ನಾಗರೀಕತೆಯು ನಮ್ಮ ನಿತ್ಯ ಜೀವನದಲ್ಲಿಯೇ ಇದ್ದು, ಭಾರತೀಯ ಪರಂಪರ ನಾಗರೀಕತೆಯಲ್ಲಿ ನಾವು ನಿತ್ಯ ತೊಡಗಿಸಿಕೊಂಡಿದ್ದೇವೆ. ಪ್ರತಿನಿತ್ಯ ಮಕ್ಕಳಿಗೆ ಈ ಆಚರಣೆಯನ್ನು ತಿಳಿಸುವ ಕೆಲಸ ಮಾಡಬೇಕಾಗಿದೆ ಎಂದರು.

ಅನಾಹುತಗಳಾದ ವೇಳೆ ಮಹಿಳೆಯರು ಮತ್ತು ಮಕ್ಕಳ ಮೇಲೆ ಮೊದಲು ಆಕ್ರಮಣಗಳಾಗುತ್ತಿದೆ. ನಮ್ಮ ಚಿಂತನೆಗಳ ಮೇಲು ಕೂಡ ಆಕ್ರಮಣ ಪ್ರಾರಂಭವಾಗಿದೆ. ಚಂದ್ರಯಾನ ನೋಡಿದ್ದೇವೆ. ಮಂಗಳ ಯಾನ ನೋಡಿದ್ದು, ವಿಜ್ಞಾನಿಗಳು ಸಂಶೋಧನೆಯಲ್ಲಿ ತೊಡಗಿದ್ದಾರೆ. ಅದರಲ್ಲೂ ಮಹಿಳೆಯರು ಕೂಡ ಇರುವುದನ್ನು ಕಾಣಬಹುದು. ಎಲ್ಲಾ ಕ್ರೀಡಾಕೂಟ ಸ್ಪರ್ದೆಯಲ್ಲೂ ಕೂಡ ಮಹಿಳೆಯರು ಕಾಲಿಟ್ಟಿ ಗೆಲುವು ಸಾಧಿಸಿ ದೇಶಕ್ಕೆ ಕೀರ್ತಿ ತಂದುಕೊಟ್ಟಿದ್ದಾರೆ ಎಂದು ಕಿವಿಮಾತು ಹೇಳಿದರು.

ಸಾವಿರಾರು ವರ್ಷಗಳಿಂದಲೂ ಭಾರತೀಯರೆಲ್ಲಾ ಸರ್ವೇಜನಾ ಸುಖಿನೋಭವಯ ಎನ್ನುವಂತೆ ನಾವುಗಳು ನಡೆದುಕೊಳ್ಳುತ್ತಿದ್ದೇವೆ. ಕೋವಿಡ್ ಸಂದರ್ಭದಲ್ಲಿ ಅದು ನಿಜವಾಗಿದೆ. ವಸುಧೈವ ಕುಟುಂಬ ಎನ್ನುವುದನ್ನು ನಮ್ಮ ಸಹೋಧರಿಯರು ತೋರಿಸುತ್ತಿದ್ದಾರೆ. ಸಹೋಧರ ಮತ್ತು ಸಹೋಧರಿ ಎಂದು ಕರೆಯಬೇಕೆಂದು ಹಾಗೂ ಪ್ರತಿಯೊಬ್ಬರೂ ನಮ್ಮ ಕುಟುಂಬದ ಸದಸ್ಯರು ಎಂದು ಸ್ವಾಮಿ ವಿವೇಕಾನಂದರು ಹೇಳಿದರು.

ನಾವುಗಳೆಲ್ಲಾ ಹೆಣ್ಣು ಮಕ್ಕಳ ಬಗ್ಗೆಯೇ ಮಾತನಾಡಲು ಸೇರಿರುವುದಿಲ್ಲ. ದೇಶದ ಬಗ್ಗೆ ಮಾತನಾಡಲು ಸೇರಲಾಗಿದೆ. ೧೨ನೇ ಶತಮಾನದಲ್ಲಿ ಮಹಿಳಾ ಸ್ವಾತಂತ್ರದ ಬಗ್ಗೆ ಮಾತನಾಡಿದ್ದು, ಬೇರೆ ಬೇರೆ ದೇಶಗಳಲ್ಲಿ ಹೆಣ್ಣು ಮಕ್ಕಳೆ ಅಧಿಕಾರದ ಚುಕಾಣಿ ಹಿಡಿದಿದ್ದರು. ಆಗೇ ನಮ್ಮ ದೇಶದಲ್ಲೂ ಕೂಡ ಮಹಿಳೆ ಅಧಿಕಾರ ನಡೆಸಿದ್ದಾರೆ ಎಂದು ಹೇಳಿದರು. ವಿಜಯನಗರ ಸಾಮ್ರಾಜ್ಯದಲ್ಲಿ ಕೃಷ್ಣದೇವರಾಯನಿಗೆ ೧೯೦೫ ದಾಸಿಯರು ಇದ್ದರು ಎಂದು ಬ್ರಿಟಿಷ್ ಲೇಖಕರು ತಿಳಿಸಿದ್ದು, ಆದರೇ ಇತಿಹಾಸಕಾರರು ಹುಡುಕಿಕೊಂಡು ಹೋಗಿದಂತೆ ಮಹಿಳಾ ಸೇನಾನಿಗಳು ಅಧಿಕವಾಗಿ ಆ ಕಾಲದಲ್ಲೂ ಇದ್ದರು ಎಂದು ತಿಳಿದು ಬಂದಿದೆ ಎಂದು ಹಿಂದಿನ ಕಾಲದ ಬಗ್ಗೆ ಕೆಲ ವಿಷಯವನ್ನು ಮೆಲುಕು ಹಾಕಿದರು.

ಇದೆ ವೇಳೆ ನ್ಯಾಯವಾದಿಗಳು ಹಾಗೂ ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಕುಮಾರಿ ಮಂಜುಳಾ, ಪ್ರಸ್ತೂತಿ ಮತ್ತು ಸ್ತ್ರೀರೋಗ ತಜ್ಞರು ಹಾಗೂ ವೈದ್ಯಕೀಯ ನಿರ್ದೇಶಕರಾದ ಡಾ|| ಸೌಮ್ಯಮಣಿ, ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಸಿಂಡಿಕೇಟ್ ಮಾಜಿ ಸದಸ್ಯರಾದ ಅಶ್ವಿನಿ ಶಂಕರ್, ಪ್ರಸ್ತೂತಿ ಸ್ತ್ರೀರೋಗ ತಜ್ಞರಾದ ಡಾ|| ಭಾರತಿ ರಾಜಶೇಖರ್, ಮಹಿಳಾ ಸಮನ್ವಯ ವಿಭಾಗದ ರಮ್ಯ, ಸಮ್ಮೇಳನದ ಸಂಚಾಲಕಿ ಶಾಂತಲಕ್ಷ್ಮಿ, ರೋಟರಿ ಮಿಡ್ ಟೌನ್ ಅಧ್ಯಕ್ಷರಾದ ಮಮತಾ ಪಾಟೀಲ್, ಹಾಸನವಾಣಿ ದಿನಪತ್ರಿಕೆ ಸಂಪಾದಕಿ ಲೀಲಾವತಿ, ಭಾರತ್ ಸ್ಕೌಟ್ ಅಂಡ್ ಗೈಡ್ಸ್ ಕಾಂಚನಮಾಲ, ಗಾಯಕಿ ವಾಣಿ ನಾಗೇಂಧ್ರ, ವೇಧವತಿ, ವೇದಶ್ರೀ ಇತರರು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *