ಹಾಸನ : ಮಕ್ಕಳಿಗೆ ಶಿಕ್ಷಣದ ಜೊತೆ ಸಂಸ್ಕಾರ, ವಿನಯ ಕಲಿಸಿಪ್ರತಿಭಾವಂತ ಮಕ್ಕಳ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸ್ವಾಮೀಜಿ ಮಾತುಹಾಸನ: ಮಕ್ಕಳಿಗೆ ವಿಧ್ಯೆ ಒಂದನ್ನೆ ಕಲಿಸಿ ಅಂಕಕ್ಕೆ ಮಾತ್ರ ಸೀಮಿತಗೊಳಿಸದೇ ಜೊತೆ ಜೊತೆಯಲ್ಲಿ ಸಂಸ್ಕಾರ ಮತ್ತು ವಿನಯವನ್ನು ಕಲಿಸಬೇಕು ಎಂದು ಶ್ರೀ ಜವೇನಹಳ್ಳಿ ಮಠದ ಮಠಾಧೀಶರಾದ ಶ್ರೀ ಸಂಗಮೇಶ್ವರ ಮಹಾಸ್ವಾಮೀಜಿ ಹಿತಾ ನುಡಿದರು.

ನಗರದ ಸಂಗಮೇಶ್ವರ ಬಡಾವಣೆ ಬಳಿ ಇರುವ ಜವೇನಹಳ್ಳಿ ಮಠದ ಸಭಾಂಗಣದಲ್ಲಿ ಯಶು ಚಿಲ್ಡ್ರನ್ ಅಂಡ್ ಕ್ಲಚರಲ್ ಅಕಾಡೆಮಿ ಮತ್ತು ಅರೋರ ಎಜುಕೇಷನಲ್ ಟ್ರಸ್ಟ್ ಇವರ ಸಂಯುಕ್ತಾಶ್ರಯದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಅಕಾಡೆಮಿ ಹಾಗೂ ಟ್ರಸ್ಟಿನ ವಾರ್ಷಿಕೋತ್ಸವ ಮತ್ತು ಯಶೋಧರವರ ತಾಯಿ ಮತ್ತು ಪತಿ ಸ್ಮರಣೆಗಾಗಿ ಪ್ರತಿಭಾವಂತ ಮಕ್ಕಳಿಗೆ ಚಿಗುರುರತ್ನ, ಪ್ರತಿಭಾರತ್ನ, ಸಾಧನರತ್ನ ಮತ್ತು ಮೈಸೂರು ರತ್ನ ಪ್ರಶಸ್ತಿ ಪ್ರಧಾನ ಸಮಾರಂಭ ನೆರವೇರಿಸಿ ದಿವ್ಯಸಾನಿಧ್ಯವಹಿಸಿ ಮಾತನಾಡಿದ ಅವರು,

ಮನುಷ್ಯನಾಗಿ ಜನ್ಮತಾಳಿರುವ ನಾವುಗಳು ಮನುಷ್ಯರು ಮನುಷ್ಯರಿಗಾಗಿ ಸೇವೆ ಮಾಡುವ ಮೂಲಕ ಸಮಾಜಮುಖಿ ಕೆಲಸ ಮಾಡುವುದನ್ನು ಮೈಗೂಡಿಸಿಕೊಳ್ಳಬೇಕು. ಮಕ್ಕಳಿಗೆ ಮನೆಯಲ್ಲಿ ಪಾಠ ಶಾಲೆಯಲ್ಲಿ ಶಿಕ್ಷಣ ಒಂದಕ್ಕೆ ಸೀಮತ ಮಾಡದೇ ಹಿರಿಯರಿಗೆ ಗೌರವ ಕೊಡುವುದನ್ನು ಹಾಗೂ ಸಮಾಜದಲ್ಲಿ ಹೇಗೆ ಬದುಕು ಸಾಗಿಸಬೇಕೆಂಬುದನ್ನು ಕೊಟ್ಟರೆ ಮಾತ್ರ ಮುಂದಿನ ಭವಿಷ್ಯ ಉಜ್ವಲವಾಗಿರುತ್ತದೆ. ಉತ್ತಮವಾಗಿರವ ವಿಧ್ಯೆ, ವಿನಯ, ಸಂಸ್ಕಾರ ಬೇಕು.

ಪ್ರಸ್ತುತದಲ್ಲಿ ಮುಂದೆ ಏನಾಗಬೇಕು ಎಂದು ಮಕ್ಕಳನ್ನು ಕೇಳಿದರೇ ಇಂಜಿನಿಯರ್, ಡಾಕ್ಟರ್ ಆಗಬೇಕೆಂದು ಹೇಳುತ್ತಾರೆ. ಎಲ್ಲಾರು ಇವರೆಡರನ್ನು ಆಯ್ಕೆ ಮಾಡಿಕೊಂಡರೇ ಶಿಕ್ಷಕರು ಆಗುವವರು ಯಾರು? ದೇಶ ಕಾಯುವವರು ಯಾರು? ಒಬ್ಬ ಹುಡುಗಾನಾದರೂ ಸ್ವಾಮಿ ವಿವೇಕಾನಂದರಾಗೆ ದೊಡ್ಡ ಸನ್ಯಾಸಿ ಆಗುತ್ತೇನೆ ಎಂದು ಯಾರಾದರೂ ಹೇಳುತ್ತಾರಾ! ಸ್ಪರ್ದಾತ್ಮಕ ಜಗತ್ತಿನಲ್ಲಿ ಎಲ್ಲಾರು ವಿದ್ಯಾವಂತರು, ಬುದ್ದಿವಂತರಾಗುತ್ತಿದ್ದಾರೆ ಹೊರತು ಹೃದಯವಂತರಾಗುತ್ತಿಲ್ಲ. ಮಾನವೀಯ ಮೌಲ್ಯವನ್ನು ಅಳವಡಿಸಿಕೊಳ್ಳುವಂತಹ ವಿಧ್ಯೆಗಳು ಕಡಿಮೆ ಆಗಿದೆ. ನಾನು ಎಷ್ಟು ಅಂಕಗಳನ್ನು ಪಡೆದಿದ್ದೇನೆ. ಇದಕ್ಕೆ ಬಹಳಷ್ಟು ಪೋಷಕರು ಮಕ್ಕಳ ಮೇಲೆ ಒತ್ತಡ ಹಾಕುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಭಾರತೀ ಸಂಸ್ಕೃತಿಯಲ್ಲಿ ವೃದ್ಧಾಶ್ರಮ ಎನ್ನುವುದು ಇಲ್ಲ. ಆದರೇ ಪ್ರಸ್ತುತದಲ್ಲಿ ಮಕ್ಕಳಿಗಾಗಿ ತ್ಯಾಗ ಮಾಡಿದ ಪೋಷಕರನ್ನು ಅತೀ ವಿದ್ಯಾವಂತರಿಂದಲೇ ವೃದ್ದಾಶ್ರಮ ಮತ್ತು ಅನಾಥಾಶ್ರಮಕ್ಕೆ ತಳ್ಳುವ ಪ್ರವೃತ್ತಿ ಹೆಚ್ಚಾಗುತ್ತಿದೆ ಎಂದು ಆತಂಕವ್ಯಕ್ತಪಡಿಸಿದರು. ಯಾವುದೇ ಆಗಿರಲಿ ಅತೀ ವ್ಯಾಮೋಹ ಇರಬಾರದು. ಇದ್ದರೇ ಬಹಳಷ್ಟು ತೊಂದರೆಗೆ ಒಳಗಾಗಬೇಕಾಗುತ್ತದೆ ಎಂದು ಕಿವಿಮಾತು ಹೇಳಿದರು.

ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಸಂಸ್ಕೃತಿ ಕಲಿಸುವಂತಾಗಬೇಕು. ಆಗೇ ಮಕ್ಕಳ ಪ್ರತಿಭೆಗೆ ಪ್ರೋತ್ಸಹಿಸುವ ಕೆಲಸ ಮಾಡಬೇಕೆಂದು ಸಲಹೆ ನೀಡಿದರು. ಪ್ರತಿಭಾವಂತ ಮಕ್ಕಳಾದ ವಿ.ಎಂ. ಧನುಷ್ ಗೆ ಚಿಗುರು ರತ್ನ ಪ್ರಶಸ್ತಿ, ಎ.ಎಂ. ಸದ್ವಿನಿಗೆ ಪ್ರತಿಭಾರತ್ನ, ದೇಸಿಹ ಕನಸುಗೆ ಸಾಧನರತ್ನ ಮತ್ತು ಹೆಚ್.ಜಿ. ಅಭಿರಾಮ್ ಮೈಸೂರು ರತ್ನ ಪ್ರಶಸ್ತಿ ನೀಡಿ ಗೌರವಿಸಿದರು.

ಇದೆ ವೇಳೆ ಕವಯತ್ರಿ ವಾಣಿ ಮಹೇಶ್, ಹಿರಿಯ ಸಾಹಿತಿ ಸುಶೀಲಸೋಮಶೇಖರ್, ಅಕಾಡೆಮಿ ಮತ್ತು ಟ್ರಸ್ಟ್ ಮಹಿಳಾ ವೇದಿಕೆ ರಾಜ್ಯಾಧ್ಯಕ್ಷರು ಯಶೋಧ ನಾರಾಯಣ್, ಶಿಕ್ಷಕಿ ಮತ್ತು ಕವಯತ್ರಿ ಕೆ.ಪಿ. ಭಾರತಿ, ಲೇಖಕಿ ರೇಖಾ ಪ್ರಕಾಶ್, ಜಿಲ್ಲಾಧ್ಯಕ್ಷರಾದ ಅಮೀತಾ ಸುಬ್ಬಯ್ಯ, ಪ್ರಧಾನ ಕಾರ್ಯದರ್ಶಿ ಶೃತಿ ಸುಬ್ಬಯ್ಯ, ಉಪಾಧ್ಯಕ್ಷ ಸುನೀತ್ ಗೌಡ, ಸುಮನ್ ಅನುಷ್ ಹಾಘು ಭಾರತ ಜ್ಞಾನ ವಿಜ್ಞಾನ ಸಮಿತಿ ಅಧ್ಯಕ್ಷರಾದ ಶೇಖರ್ ಇತರರು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *