
ಚನ್ನರಾಯಪಟ್ಟಣ : ತಾಲೂಕಿನ ಬಾಗೂರು ಹೋಬಳಿಯ ಜೋಯಿಸರ ಹಳ್ಳಿಯಲ್ಲಿ ಶ್ರೀ ದೋಡಮ್ಮ ದೇವಿ ದೇವಾಲಯದ ಉದ್ಘಾಟನೆ ಹಾಗೂ ಶಿಲಾಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ಜನಪ್ರಿಯ ಶಾಸಕರಾದ ಸಿ ಎನ್ ಬಾಲಕೃಷ್ಣ ರವರು ಉದ್ಘಾಟಿಸಿದರು
ನಂತರ ಮಾತನಾಡಿ ಮುಂದಿನ ದಿನಗಳಲ್ಲಿ ಅಣ್ಣಮ್ಮ ದೇವಸ್ಥಾನದ ಅಭಿವೃದ್ಧಿಗೆ ಮೂರು ಲಕ್ಷ ಅನುದಾನವನ್ನು ಕೊಟ್ಟು ದೇವಸ್ಥಾನದ ಜೀರ್ಣೋದ್ಧಾರ ಮಾಡಲಾಗುವುದು, ಗ್ರಾಮಸ್ಥರು ಎಲ್ಲರೂ ಒಗ್ಗಟ್ಟಿನಿಂದ ದೇವಸ್ಥಾನದ ನಿರ್ಮಾಣಕ್ಕೆ ಕೈಜೋಡಿಸಿರುವುದು ತುಂಬಾ ಸಂತೋಷದ ವಿಚಾರ ಎಂದರು,
ದೊಡ್ಡಮ್ಮ ದೇವರು ಸಮಸ್ತ ಗ್ರಾಮಸ್ಥರಿಗೆ ಒಳ್ಳೇದನ್ನ ಮಾಡಲಿ ಕಾಲಕಾಲಕ್ಕೆ ಮಳೆ ಬೆಳೆಯಾಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿದರು.
ಇದೇ ಸಂದರ್ಭದಲ್ಲಿ ಶಾಸಕರಾದ ಸಿಎನ್ ಬಾಲಕೃಷ್ಣ,ಜೆಡಿಎಸ್ ಮುಖಂಡರಾದ ನೆಟ್ಟೇಕೆರೆನಾಗರಾಜು, ಮೂಡನಹಳ್ಳಿ ಚಂದ್ರಣ್ಣ, ಗ್ರಾಮ ಪಂಚಾಯತಿ ಸದಸ್ಯರಾದ ರಾಕಿ, ಜೆಡಿಎಸ್ ಮುಖಂಡ ಪ್ರಭಾಕರ್ ಹಾಗೂ ಜೋಯಿಸರಹಳ್ಳಿ ಗ್ರಾಮದ ಮುಖಂಡರು ಮತ್ತು ಅಕ್ಕಪಕ್ಕದ ಗ್ರಾಮಗಳ ಮುಖಂಡರು ಹಾಜರಿದ್ದರು.





