ವಿಕಲಚೇತನರ ಯಾವುದೇ ಸಮಸ್ಯೆಗಳಿಗೆ ಸ್ಪಂದಿಸಲು ನಾನು ಸದಾ ಸಿದ್ದ ಶಾಸಕ ಹೆಚ್.ಪಿ. ಸ್ವರೂಪ್ ಭರವಸೆ

ಹಾಸನ: ಪ್ರಸ್ತುತದಲ್ಲಿ ವಿಕಲಚೇತನರು ಯಾವುದೇ ವಿಚಾರದಲ್ಲಿ ಹಿಂದೆ ಇರುವುದಿಲ್ಲ. ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಕೂಡ ಸಾಧನೆ ಮಾಡಿದ್ದು, ಅವರ ಸಮಸ್ಯೆಗಳಿಗೆ ಸ್ಪಂದಿಸಲು ನಾನು ಸದಾ ಸಿದ್ಧವಾಗಿದ್ದೇನೆ ಎಂದು ಕ್ಷೇತ್ರದ ಶಾಸಕ ಹೆಚ್.ಪಿ. ಸ್ವರೂಪ್ ತಿಳಿಸಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿ?ವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಜಿಲ್ಲೆಯ ವಿಕಲಚೇತನರ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಭಾನುವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ವಿಶ್ವ ವಿಕಲಚೇತನರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿಕಲಚೇತನರ ಯಾವುದೇ ಸಮಸ್ಯೆಗಳಿಗೆ ಸ್ಪಂದಿಸಲು ತಾನು ಸದಾ ಸಿದ್ದ. ಯಾವುದೇ ರೀತಿಯ ಹಿಂಜರಿಕೆ ಇಲ್ಲದೆ ತಮ್ಮ ಸಮಸ್ಯೆಗಳ ಬಗ್ಗೆ ತನ್ನ ಗಮಕ್ಕೆ ತಂದರೆ ಅಂತಹ ಸಮಸ್ಯೆಗಳ ನಿವಾರಣೆ ಮಾಡಲಾಗುವುದು ಇಂದು ಭರವಸೆ ನೀಡಿದರು.

ವಿಕಲಚೇತನರು ಯಾವುದೇ ವಿಚಾರದಲ್ಲಿ ಹಿಂದೆ ಇಲ್ಲ, ಸ್ಪರ್ಧೆ, ಸಾಂಸ್ಕೃತಿಕ ಚಟುವಟಿಕೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವ ಅನೇಕ ಉದಾಹರಣೆಗಳು ನಮ್ಮ ಕಣ್ಣ ಮುಂದೆ ಇದೆ ಎಂಧರು. ಅದೇ ರೀತಿ ಎಲ್ಲರೂ ತಮಗೆ ಆಸಕ್ತಿ ಇರುವ ಕ್ಷೇತ್ರದಲ್ಲೇ ಸಾಧನೆಗೆ ಮುಕ್ತ ಅವಕಾಶಗಳಿದ್ದು, ಸರಕಾರದಿಂದ ಇರುವ ಸೌಲಭ್ಯಗಳನ್ನು ಬಳಸಿಕೊಂಡು ತಮ್ಮದೇ ಆದ ನಿಟ್ಟಿನಲ್ಲಿ ತಮ್ಮ ಪ್ರತಿಭೆಗಳನ್ನು ಪ್ರದರ್ಶನ ಮಾಡಬೇಕೆಂದು ಸಲಹೆ ನೀಡಿದರು.

ಇನ್ನು ಫ್ಯಾರ ಒಲಂಪಿಕ್ ನಲ್ಲಿ ಸಾಧನೆ ಮಾಡಿದ ಗಿರೀಶ್ ಇತರರನ್ನು ಇದೆ ವೇಳೆ ನೆನಪಿಸಿಕೊಂಡರು.

ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ಕೆ. ರವಿಕಾಂತ್ ಮಾತನಾಡಿ, ಕಾನೂನು ವಿಚಾರ ಬಂದರೇ ವಿಶೇಷ ಚೇತನ ಅವರು ಯಾವುದಕ್ಕೂ ಕಾಯುವಾಗಿಲ್ಲ. ಅವರಿಗೆ ಸಂಬಂಧ ಪಟ್ಟ ವಿಶೇಷ ನ್ಯಾಯಾಲಯಗಳಿದೆ.

ಮೊದಲು ಪ್ರಕರಣ ತೆಗೆದುಕೊಂಡು ಕಳುಹಿಸುವ ರಕ್ಷಣೆ ಕಾನೂನಿನಲ್ಲಿದೆ. ವಿಶೇಷ ನ್ಯಾಯಾಲಯದ ಸೌಲತ್ತುಗಳು ಸಿಗಲಿದೆ. ಕಾನೂನಿನಲ್ಲಿ ಎಲ್ಲಾ ರಕ್ಷಣೆ ಮಾಡಿಡಲಾಗಿದೆ. ಏನೆ ಸಮಸ್ಯೆ ಇದ್ದರೂ ಕಾನೂನು ಪ್ರಾಧಿಕಾರಕ್ಕೆ ಬಂದರೇ ಸ್ಪಂದಿಸಲಿದೆ. ನಮ್ಮಲ್ಲಿ ಪ್ಯಾನಲ್ ವಕೀಲರಿದ್ದಾರೆ. ವಿಶೇಷ ಸೌಲಭ್ಯಗಳನ್ನು ಮೀಸಲಾಗಿಟ್ಡಿರುವುದನ್ನು ಯಾರಾದರೂ ಕಸಿದು ಕೊಂಡರೆ ಎರಡು ವರ್ಷದ ಶಿಕ್ಷೆ ಒಂದು ಲಕ್ಷದವರೆಗೂ ದಂಢ ವಿಧಿಸಲಾಗುವುದು.

ಯಾರು ಹೆದರಬೇಡಿ. ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳನ್ನು ಕೊಡಲಾಗಿದೆ ಎಂಧು ವಿಕಲಚೇತನರಿಗೆ ದೈರ್ಯ ತುಂಬಿದರು. ವಿಕಲಚೇತನರ ಹಕ್ಕುಗಳಿಗೆ ಚ್ಯುತಿ ಬರುವ ಕೆಲಸ ಮಾಡಿದರೆ, ಕಾನೂನಿನಲ್ಲಿ ಕ್ರಮ ಕೈಗೊಳ್ಳುವ ಸಲುವಾಗಿ ಕಾನೂನುಗಳಿವೆ. ದೌರ್ಜನ್ಯ, ಹಲ್ಲೆ, ಲೈಂಗಿಕ ದೌರ್ಜನ್ಯ, ಅವರು ಬಳಸುವ ಉಪಕರಣಗಳನ್ನು ಹಾಳು ಮಾಡುವುದು, ಅವರ ಮನಸ್ಸಿಗೆ ನೋಯಿಸುವ ಕೆಲಸ ಮಾಡುವುದು ಹೀಗೆ ಯಾವುದೇ ರೀತಿಯ ಘಟನೆಗಳು ನಡೆದರೆ ತಾವು ಕಾನೂನು ಹೋರಾಟ ಮಾಡಬಹುದು ಎಂದು ಸಲಹೆ ನೀಡಿದರು.

ವಿಕಲಚೇತನರಿಗೆ ನ್ಯಾಯ ಒದಗಿಸುವ ಸಲುವಾಗಿ ವಿಶೇಷ ನ್ಯಾಯಾಲಯ ಸ್ಥಾಪನೆ ಆಗಿದೆ, ವಿಚಾರಣೆ ವೇಳೆ ಆಧ್ಯತೆ ಮೇರೆಗೆ ಅವರನ್ನು ಕಾಯಿಸದೆ ಬೇಗ ಅವ್ರ ಪ್ರಕರಣಗಳನ್ನು ಇತ್ಯರ್ಥ ಮಾಡಿ ಕಳುಹಿಸಲು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಕೂಡ ನೇಮಕ ಮಾಡಲಾಗಿದೆ ಈ ಎಲ್ಲಾ ಕಾನೂನುಗಳ ಬಗ್ಗೆ ಎಲ್ಲರೂ ತಿಳಿದುಕೊಳ್ಳುವ ಅಗತ್ಯ ಇದೆ ಎಂದು ಹೇಳೀದರು.

ಕಾರ್ಯಕ್ರಮದಲ್ಲಿ ಸಾಧನೆ ಮಾಡಿದ ವಿಕಲಚೇತನ ಹಾಗೂ ಇತರರನ್ನು ಇದೆ ವೇಳೆ ಗುರುತಿಸಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಇದೆ ವೇಳೆ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಈ. ಕೃಷ್ಣೇಗೌಡ, ಜೈ ಭೀಮ್ ಬ್ರಿಗೇಡ್ ಜಿಲ್ಲಾಧ್ಯಕ್ಷ ರಾಜೇಶ್, ಜಿ.ಒ. ಮಹಾಂತಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ ಅನುಪಮ, ಅಂತಾರಾಷ್ಟ್ರೀಯ ಕ್ರೀಡಾಪಟು ಅಂತೋಣಿ, ಮಹೇಶ್, ಉಪನಿರ್ದೇಶಕ ಹೆಚ್.ಆರ್. ಸುರೇಶ್ ಇತರರು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *