
ಸಕಲೇಶಪುರ : ಶ್ರೀ ಗುಹೆಕಲ್ಲಮ್ಮ ದೇವಸ್ಥಾನ -ಭಕ್ತ ಮಹಾಶಯರೇ,ಪ್ರತಿವರ್ಷದಂತೆ ಈ ವರ್ಷವೂ ಆದಿಶಕ್ತಾತ್ಮಿಕೆ ಶ್ರೀ ಗುಹೆಕಲ್ಲಮ್ಮ ದೇವಿಯವರ ಕಾರ್ತಿಕ ಪೂಜಾ ಮಹೋತ್ಸವವನ್ನು ವಿಜೃಂಭಣೆಯಿಂದ ದಿನಾಂಕ : 11-12-2023ನೇ ಸೋಮವಾರ ನಡೆಸಲು ತೀರ್ಮಾನಿಸಿರುತ್ತೇವೆ.
ಭಕ್ತಾಧಿಗಳು ಈ ಕಾರ್ತಿಕ ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ತನು, ಮನ, ಧನಗಳಿಂದ ಸಹಕಾರವನ್ನಿತ್ತು ಶ್ರೀ ಗುಹೆಕಲ್ಲಮ್ಮ ದೇವಿಯವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ.
ಗಂಗೆ ಪೂಜೆ : ಸಂಜೆ 6-30ಕ್ಕೆ ಪವಿತ್ರ ಹೇಮಾವತಿ ನದಿ ತೀರದಲ್ಲಿ ನಡೆಯಲಿದೆ. ನಂತರ ದೇವಿಯವರ ಮುಖವಾಡಗಳು, ಗಂಗೆ ಕಳಸಗಳೊಂದಿಗೆ ಮೆರವಣಿಗೆಯು ಸಂಜೆ 7-00 ರಿಂದ ಮಂಗಳ ವಾಧ್ಯಗಳೊಂದಿಗೆ ಹೊರಡುತ್ತದೆ.
ಈ ಮೆರವಣಿಗೆಯಲ್ಲಿ ಊರಿನ ಎಲ್ಲಾ ಭಕ್ತಾಧಿಗಳು ಭಾಗವಹಿಸಬೇಕಾಗಿ ಕೋರುತ್ತೇವೆ.ರಾತ್ರಿ 9-30ಕ್ಕೆ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಹಾಗೂ ಅನ್ನದಾಸೋಹ ನಡೆಸಲಾಗುತ್ತದೆ. ಸರ್ವರಿಗೂ ಸುಸ್ವಾಗತ.
ಅನ್ನದಾಸೋಹಕ್ಕೆ ಅಕ್ಕಿ, ತರಕಾರಿ, ತೆಂಗಿನಕಾಯಿ, ಮತ್ತಿತರೆ ಧವಸಧಾನ್ಯಗಳನ್ನು ನೀಡಲು ಬಯಸುವ ಭಕ್ತಾಧಿಗಳು ದೇವಸ್ಥಾನದ ಅರ್ಚಕರನ್ನು ಸಂಪರ್ಕಿಸಲು ಕೋರುತ್ತೇವೆ.
ಹೆಚ್ಚಿನ ವಿವರಗಳಿಗೆ ದೇವಸ್ಥಾನದ ಅರ್ಚಕರನ್ನು ಸಂಪರ್ಕಿಸಬೇಕಾಗಿ ವಿನಂತಿಸುತ್ತೇವೆ. ಶ್ರೀ ರವಿಶಾಸ್ತ್ರಿ, ಮೊ : 9740378329
ದಿನಾಂಕ : 12-12-2023ನೇ ಮಂಗಳವಾರ ಬೆಳಗ್ಗೆ 6-30 ರಿಂದ ಶ್ರೀ ದೇವಿಯವರ ಭಂಟ ದೇವರಿಗೆ ಬಲಿಪೂಜೆ




