
ಅರಸೀಕೆರೆ : ತಾಲ್ಲೂಕು ಗಂಡಸಿ ಹೋಬಳಿ ಹಿರಿಸಮುದ್ರ ಗ್ರಾಮದಲ್ಲಿ ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು ಕೃಷಿ ಮಹಾವಿದ್ಯಾಲಯ ಕಾರೇಕೆರೆ ಹಾಸನದ ಅಂತಿಮ ವರ್ಷದ ಕೃಷಿ ಹಾಗು ಜೈವಿಕ ತಂತ್ರಜ್ಞಾನ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಅಂಗವಾಗಿ ತೆಂಗಿನಲ್ಲಿ ಬಿಳಿನೊಣದಿಂದ ಬರುವ ಮಸಿರೋಗಕ್ಕೆ ಬೇವಿನೆಣ್ಣೆ ಹಾಗು ಲೆಕಾನಿಸಿಲಿಯಮ್ ಲೆಕಾನಿ ಎಂಬ ಶಿಲೀಂದ್ರವನ್ನು ಸಿಂಪರಣೆ ಮಾಡಿ ಪ್ರಯೋಗ ಮಾಡಿದರು.
ಬೇವಿನೆಣ್ಣೆ ಸಿಂಪರಣೆ ಮಾಡಿದ ಸುಮಾರು ಆರನೇಯ ದಿನಕ್ಕೆ ಪರಿಶೀಲಿಸಿ ನೋಡಿದಾಗ ತೆಂಗಿನ ಗರಿಯ ಮೇಲಿದ್ದ ಮಸಿ ಕಳಚಿರುವುದು ಕಂಡುಬಂದಿದೆ. ಇದರಿಂದ ಮಸಿರೋಗಕ್ಕೆ ಬೇವಿನೆಣ್ಣೆ ಸಿಂಪಡಿಸುವುದು ಉಪಯುಕ್ತ ಎಂಬುದು ಕಂಡು ಬಂದಿದೆ. ಹಾಗೆಯೇ ಲೆಕಾನಿಸಿಲಿಯಮ್ ಲೆಕಾನಿ ಶಿಲೀಂಧ್ರದ ಪರಿಣಾಮವನ್ನು ಹದಿನೈದು ದಿನಗಳ ನಂತರ ಪರಿಶೀಲಿಸಬೇಕಾಗಿದೆ.
