
ಸಕಲೇಶಪುರ :- ತಾಲೂಕಿನ ಚಂಗಡಹಳ್ಳಿ ಹಾಗೂ ವಣಗೂರು ಕೂಡುರಸ್ತೆ ಗ್ರಾಮಪಂಚಾಯಿತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ, ಆವರಣದಲ್ಲಿ ದಿನಾಂಕ 9.12.2023ನೇ ಶನಿವಾರ ಜ್ಞಾನ ಸಮೃದ್ಧಿ ಚಾರಿಟೇಬಲ್ ಟ್ರಸ್ಟ್ (ರಿ ) ಆಯೋಜಿಸಿ ತಾಲೂಕಿನ ವಿವಿಧ ಸಂಘಟನೆಗಳೊಂದಿಗೆ “ಶ್ರೀ ಆದಿಚುಂಚನಗಿರಿ ಆಸ್ಪತ್ರೆ”ಯ ಸಂಯುಕ್ತ ಆಶ್ರಯದಲ್ಲಿ “ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆ ಮತ್ತು ರಕ್ತದೊತ್ತಡ ಹಾಗೂ ಮಧುಮೇಹಕ್ಕೆ ಸಂಬಂಧ ಪಟ್ಟ ” ಶಿಬಿರವನ್ನು ಏರ್ಪಡಿಸಲಾಗಿದೆ.
ತಾಲೂಕಿನ ಸುತ್ತಮುತ್ತಲಿನ ಗ್ರಾಮಸ್ಥರು ಈ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ವಿನಂತಿ. ದಿನಾಂಕ:- 09-12-2023 ಸ್ಥಳ:- ಚಂಗಡಹಳ್ಳಿ ಹಾಗೂ ವಣಗೂರು ಕೂಡುರಸ್ತೆಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಆವರಣ. ಸಮಯ:-ಬೆಳಗ್ಗೆ 9.30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ.

