ಆಲೂರು ತಾಲೂಕಿನ ಮರಸು ಗ್ರಾಮದ ಬಳಿ ಅಪರಿಚಿತ ವ್ಯಕ್ತಿಯೋರ್ವ ರೈಲಿನ ಭಾಗಿಲಿನಲ್ಲಿ ನಿಂತು ಪ್ರಯಾಣಿಸುತ್ತಿರುವಾಗ ಆಕಸ್ಮಿಕವಾಗಿ ರೈಲಿನಿಂದ ಕೆಳಗೆ ಬಿದ್ದು ರೈಲಿನ ಚಕ್ರಕ್ಕೆ ಸಿಲುಕಿ ಮೃತಪಟ್ಟಿರುವ ಘಟನೆ ನಡೆದಿದೆ.

ಇನ್ನೂ ಮೃತಪಟ್ಟಿರುವ ವ್ಯಕ್ತಿಯ ದೇಹ ಎರಡು ತುಂಡಾಗಿದ್ದು ಸ್ಥಳಕ್ಕೆ ಹಾಸನದ ರೈಲ್ವೆ ಪೊಲೀಸರು ಭೇಟಿ ನೀಡಿ ಮೃತ ದೇಹವನ್ನು ಹಾಸನಕ್ಕೆ ರವಾನಿಸಿದ್ದಾರೆ.

ಮೃತಪಟ್ಟಿರುವ ವ್ಯಕ್ತಿಯಾರೆಂದು ಇನ್ನೂ ತಿಳಿದು ಬಂದಿಲ್ಲಮೃತ ವ್ಯಕ್ತಿಯ ಮಾಹಿತಿ ಇದ್ದಲ್ಲಿ ಹಾಸನದ ರೈಲ್ವೆ ಪೊಲೀಸ್ ಇಲಾಖೆಯನ್ನು ಸಂಪರ್ಕ ಮಾಡಲು ಪೊಲೀಸ್ ಇಲಾಖೆಯವರು ತಿಳಿಸಿದ್ದಾರೆ,ಮೃತ ವ್ಯಕ್ತಿಯ ಮೃತ ದೇಹದ ಮೇಲೆ ರೌಂಡ್ ನೆಕ್ಕಿನ ಕೆಂಪು ಬಣ್ಣದ ತುಂಬು ತೋಳಿನ ಟೀ ಶರ್ಟ್ ಇರುತ್ತದೆ ಟೀ ಶರ್ಟ್ ಮುಭಾಂಗ ಕಪ್ಪು ಬಿಳಿ ಬಣ್ಣದ ಪಟ್ಟಿ ಇದ್ದು ಅದರ ಮೇಲೆ gk general know ಎಂದು ಬರೆದಿರುತ್ತದೆ,ಹಾಗೂ ಕಪ್ಪು ನೀಲಿ ಬಣ್ಣದ (ನೈಟ್ )ಟ್ರಾಕ್ ಪ್ಯಾಂಟ್ ಇದ್ದು ಜೇಬಿನ ಎರಡು ಕಡೇ ಬಿಳಿಗೆರೆ ಇರುತ್ತದೆ,

ಚಹಾರೆಮೃತನ ಎತ್ತರ ಸುಮಾರು 5,4 ಅಡಿ ದುಂಡು ಮುಖ ಸದೃಢ ಮೈ ಕಟ್ಟು,ಗೋಧಿ ಮೈ ಬಣ್ಣ,ತಲೆಯಲ್ಲಿ ಸುಮಾರು 4, ಸೇಂ,ಮೀ ನಷ್ಟು ಉದ್ದದ ಕಪ್ಪು ಬಿಳಿ ಮಿಶ್ರಿತ ಕೂದಲು ಮುಖದಲ್ಲಿ ಕಪ್ಪು ಬಿಳಿ ಮಿಶ್ರಿತ ಕುರುಚಲ ಗಡ್ಡ ಮೀಸೆ ಬಿಟ್ಟಿರುತ್ತಾನೆ ಹಾಗೂ ಶೇವಿಂಗ್ ಮಾಡಿರುತ್ತಾನೆ,ಹೆಚ್ಚಿನ ಮಾಹಿತಿಗಾಗಿ ಹಾಸನದ ರೈಲ್ವೆ ಪೊಲೀಸ್ ಇಲಾಖೆಯವರನ್ನು ಸಂಪರ್ಕಿಸುವಂತೆ ತಿಳಿಸಿದ್ದಾರೆ

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *