
ಚಗಚಗೆರೆ : ಮಣ್ಣಿಂದ ಕಾಯ ಮಣ್ಣಿಂದ , ಮಣ್ಣಿಂದ ಸಕಲ ವಸ್ತುಗಳೆಲ್ಲಾ ಎಂಬುದನ್ನು ಮನದಟ್ಟು ಮಾಡಿಕೊಂಡಿದ್ದ ಕೃಷಿ ಮಹಾವಿದ್ಯಾಲಯ ಕಾರೇಕೆರೆ ಹಾಸನದ ಅಂತಿಮ ವರ್ಷದ ವಿದ್ಯಾರ್ಥಿಗಳು ಗ್ರಾಮೀಣ ಕಾರ್ಯಾನುಭವ ಶಿಬಿರದ ಸಲುವಾಗಿ ವಿಶ್ವ ಮಣ್ಣಿನ ದಿನಾಚರಣೆಯನ್ನು ವ್ಯವಸ್ಥಿತವಾಗಿ ನಡೆಸಿಕೊಡಲಾಯಿತು.
ನೆರೆದ ಅತಿಥಿಗಳಿಂದ ಮಣ್ಣಿನ ಪೂಜೆ ಮಾಡಿಸಿ ಹಾಗು ಏಕಕಾಲದಲ್ಲಿ ರೈತಗೀತೆ ಹಾಡಿಸಿ ರೈತರಿ ಮಣ್ಣು ಎಷ್ಟು ಆಪ್ತ ಎಂಬುದನ್ನು ಬಿಂಬಿಸಲಾಯಿತು.ಡಾ ಎಲ್ ಬಿ ಅಶೋಕ್ ಸಹ ಪ್ರಾಧ್ಯಾಪಕರು ಮಣ್ಣು ವಿಜ್ಙಾನ ಹಾಗು ಕೃಷಿ ರಸಾಯನಶಾಸ್ತ್ರ ಇವರು ತಮ್ಮ ಪ್ರಾಸ್ತಾವಿಕ ನುಡಿಯ ಮೂಲಕ ಜಗತ್ತಿನ ಎಲ್ಲಾ ಜೀವಿಗಳಿಗೂ ಮಣ್ಣೇ ಆಧಾರ ಎಂಬುದನ್ನು ತಿಳಿಸಿಕೊಟ್ಟರು.
ಇದಾದ ನಂತರ ಡೀನ್ ಕೃಷಿ , ಕೃಷಿ ಮಹಾವಿದ್ಯಾಲಯ ಹಾಸನ ಇವರು ಪುರಂದರ ದಾಸರ ಕೀರ್ತನೆಯನ್ನು ಎಲ್ಲರಲ್ಲೂ ನೆನೆಸಿ ಮಣ್ಣು ಸಮಾಜದ ಒಂದು ಭಾಗವೆಂದು ತಿಳಿಸಿದರು.ಹಾಗೆಯೇ ಮತ್ತಿತರ ಅತಿಥಿಗಳಾದ ಓಂಕಾರಮೂರ್ತಿ, ವಿಕ್ರಮ್ ರವರು ಮಣ್ಣಿನ ಪರೀಕ್ಷೆ ರೈತರಿಗೆ ಉಪಯುಕ್ತವಾದುದೆಂದು ರೈತರಲ್ಲಿ ಮನದಟ್ಟು ಮಾಡಿಸಿದರು.
ದಿನಾಂಕ 2/12/2023 ರಂದು ಕೃಷಿ ವಿದ್ಯಾರ್ಥಿಗಳು ಚಿತ್ರಕಲಾ, ಭಾಷಣ ಹಾಗು ಪ್ರಬಂಧ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಾದ ಮಕ್ಕಳಿಗೆ ಈ ದಿನದಂದು ಅತಿಥಿಗಳಿಂದ ಬಹುಮಾನ ವಿತರಣೆ ಮಾಡಲಾಯಿತು.
ಹಾಗೆಯೇ ಕೃಷಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಮಣ್ಣಿನ ಪರೀಕ್ಷೆಯ ಮಹತ್ವವನ್ನು ಎತ್ತಿಡಿಯುವ ಕಿರುನಾಟಕವನ್ನು ಪ್ರದರ್ಷಿಸಿದರು ಹಾಗು ಗ್ರಾಮದ ಶಾಲಾ ಮಕ್ಕಳು ಸಾಂಸ್ಕ್ರುತಿಕ ಕಾರ್ಯಕ್ರವನ್ನು ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಡಾ ಎಸ್ ಎನ್ ವಾಸುದೇವನ್ ಡೀನ್ ಕೃಷಿ ,ಕೃಷಿ ಮಹಾವಿದ್ಯಾಲಯ ಹಾಸನ, ಡಾ ಎಲ್ ಬಿ ಅಶೋಕ್ , ಡಾ ನವೀನ್ ಕುಮಾರ್ ಪಿ , ಒಂಕಾರ್ಮೂರ್ತಿ ಮುಖ್ಯ ವ್ಯವಸ್ಥಾಪಕರು ಝುವಾರಿ ಫಾರ್ಮ್‌ಹಬ್, ವಿಕ್ರಮ್ ಎ ಜಿ ಉಪವ್ಯವಸ್ಥಾಪಕರು ಎಮ್ ಸಿ ಎಫ್, ಮಾಲ್ತೇಶ್ ಎಮ್ ಒ ಪಿಪಿಎಲ್ ಹಾಗು ಗ್ರಾಮ ಪಂಚಾಯತಿಯ ಉಪಾಧ್ಯಕ್ಷರಾದ ಪ್ರಮಿಳಾ ಮರಿಯಪ್ಪ ಸದಸ್ಯರಾದ ಕುಮಾರ್ ಹಾಗು ನಂಜೇಗೌಡ ಹಾಗು ತಾಲ್ಲೂಕು ಪಂಚಾಯತಿಯ ಮಾಜಿಸದಸ್ಯರಾದ ಈಶ್ವರಪ್ಪ ರವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ 250 ರೈತರು ಭಾಗವಹಿಸಿ ಕಾರ್ಯಕ್ರಮದ ಉಪಯೋಗ ಪಡೆದುಕೊಂಡರು
