ವಿಶ್ವ ಮಣ್ಣು ದಿನಾಚರಣೆ* ಮಣ್ಣು ಮತ್ತುನೀರು ಜೀವನದ ಮೂಲ.

ಹಾಸನದ ಕಾರೇಕೆರೆಯ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ಬಿ. ಎಸ್. ಸಿ (ಆನರ್ಸ್ )ಕೃಷಿ ಮತ್ತು ಬಿ.ಟೆಕ್ ಜೈವಿಕ ತಂತ್ರಜ್ಞಾನ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ 2023-24 ರ ಅಂಗವಾಗಿ ಅರಸೀಕೆರೆ ತಾಲ್ಲೂಕು ಗಂಡಸಿ ಹೋಬಳಿಯ ಕುಡುಕುಂದಿ ಗ್ರಾಮದಲ್ಲಿ *ವಿಶ್ವ ಮಣ್ಣು ದಿನಾಚರಣೆಯನ್ನು* ಹಮ್ಮಿಕೊಂಡಿದ್ದರು.

ಮೊದಲಿಗೆ ಬೆಳಗ್ಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಡುಕುಂದಿಯ ಸಹಾಭಾಗಿತ್ವದಲ್ಲಿ ಶಾಲೆಯ ಮಕ್ಕಳನ್ನು ಕರೆದುಕೊಂಡು ಮಣ್ಣು ದಿನಾಚರಣೆಯ ಧ್ಯೇಯ ವಾಕ್ಯಗಳನ್ನು ಕೂಗುತ್ತಾ ಊರಿನ ಪ್ರಮುಖ ಬೀದಿಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಜಾಥಾವನ್ನು ನಡೆಸಲಾಯಿತು. ಹಾಗೂ ಸಂಜೆ ಆಯೋಜಿಸಿದ್ದ ಮುಖ್ಯ ಕಾರ್ಯಕ್ರಮಕ್ಕೆ ಗ್ರಾಮಸ್ಥರನ್ನು ಅದೇ ವೇಳೆಗೆ ಆಹ್ವಾನಿಸಲಾಯಿತು.

ಸಂಜೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ|| ಎಸ್. ಎನ್ ವಾಸುದೇವನ್ ಡೀನ್(ಕೃಷಿ), ಕೃಷಿ ಮಹಾವಿದ್ಯಾಲಯ ಕಾರೇಕೆರೆ ಹಾಸನ ರವರು ಮಣ್ಣು ಪೂಜೆ ನೆರವೇರಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕಾಲೇಜಿನ ಮಣ್ಣು ಮತ್ತು ಕೃಷಿ ರಾಸಾಯನ ಶಾಸ್ತ್ರ ವಿಭಾಗದ ಡಾ|| ಎಲ್. ಬಿ. ಅಶೋಕ್ ರವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಹಾಗೂ ಡಾ|| ಶಶಿಕಿರಣ ಎ.ಎಸ್, ಡಾ||ಅನಿತಾ ಎಮ್. ಎಸ್, ಡಾ|| ನವೀನ್ ಕುಮಾರ ಪಿ, ಡಾ|| ಬಸವರಾಜು ಜಿ, ಡಾ|| ಸದಾಶಿವನಗೌಡ ಎಸ್. ಎನ್. ಒ ಉಪಸ್ಥಿತರಿದ್ದರು. ಮಣ್ಣು ದಿನಾಚರಣೆಯ ಅಂಗವಾಗಿ ಕೆಲವು ದಿನಗಳ ಹಿಂದೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಆಯೋಜಿಸಿದ್ದ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಡೀನ್(ಕೃಷಿ) ರವರು ಬಹುಮಾನಗಳನ್ನು ವಿತರಿಸಿ ಅಧ್ಯಕ್ಷೀಯ ಭಾಷಣವನ್ನು ನಡೆಸಿಕೊಟ್ಟರು.

ಊರಿನ ಬಾಲಕ ಬಾಲಕಿಯರು ವಿವಿಧ ವೇಷ ಭೂಷಣವನ್ನು ತೊಟ್ಟು ಎಲ್ಲರನ್ನು ರಂಜಿಸಿದರು.ಕೊನೆಯಲ್ಲಿ ಕೃಷಿ ಹಾಗೂ ಜೈವಿಕ ತಂತ್ರಜ್ಞಾನದ ವಿದ್ಯಾರ್ಥಿಗಳು ಮಣ್ಣಿನ ಮಹತ್ವ ಸಾರುವ ಗುಂಪು ಗಾಯನ, ಗುಂಪು ನೃತ್ಯ, ನಾಟಕ ಹೀಗೆ ಮುಂತಾದ ಸಾಂಸ್ಕೃತಿಕಾ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *