ಬೇಲೂರು : ಪಟ್ಟಣದ ನೆಹರು ನಗರ ವೃತ್ತದಿಂದ ವಿದ್ಯಾರ್ಥಿಗಳು ಹಾಗೂ ದಲಿತ ಪರ ಸಂಘಟನೆಗಳ ಒಕ್ಕೂಟ ಮುಕಂಡರುಗಳು ಕ್ಯಾಂಡಲ್ ಹಿಡಿದು ಮೌನ ಮೆರವಣಿಗೆ ಮೂಲಕ ಬಸವೇಶ್ವರ ವೃತ್ತದ ಬಳಿಯಿಂದ ಅಂಬೇಡ್ಕರ್ ವೃತ್ತ ತಲುಪಿ ಅಂಬೇಡ್ಕರ್ ಪುತ್ಥಳಿ ಗೆ ಪುಷ್ಪ ನಮನ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ತಾಲ್ಲೂಕು ಎಸ್ಸಿ, ಎಸ್ಟಿ ನೌಕರರ ಸಂಘದ ಅದ್ಯಕ್ಷ ಶಿವಮರಿಯಪ್ಪ ಮಾತನಾಡಿ,ಪ್ರತಿಯೊಬ್ಬ ವ್ಯಕ್ತಿ ಕೂಡ ಗೌರಯುತವಾದ ಬದುಕನ್ನು ಸಾಗಿಸಬೇಕು,ಸಮಾನತೆಯನ್ನು ಎತ್ತಿ ಹಿಡಿಯಬೇಕು.ಸಮ ಸಮಾಜ ನಿರ್ಮಾಣ ಮಾಡಬೇಕು,ಅನ್ನೋ ಕನಸನ್ನು ಕಟ್ಟಿಕೊಂಡಂತಹ ಬಾಬಸಾಹೇಬರು ತಮ್ಮ ಜೀವನದ ಆಂತಿಮ ದಿನದ ವರೆಗೂ ಕೂಡ ಸಮಾಜದ ತುಳಿತಕ್ಕೊಳಗಾದ ಹಿಂದುಳಿದ ವರ್ಗಗಳ ಶ್ರಯೋಬಿವೃದ್ದಿಗೆ ಶ್ರಮಿಸಿದಂತಹ ವ್ಯಕ್ತಿ.ಅವರು ಹಾಕಿಕೊಟ್ಟ ಒಂದಿಷ್ಟು ಆದರ್ಶಗಳನ್ನು ನಾವೇಲ್ಲರೂ ಅಳವಡಿಸಿಕೊಂಡಿದ್ದೆಯಾದರೆ..ಅವರ ಆತ್ಮಕ್ಕೆ ಶಾಂತಿ ಸಿಗುತ್ತದೆ.

ಎಲ್ಲೋ ಒಂದು ಕಡೆ ಅಂಬೇಡ್ಕರ್ ಚಿಂತನೆಗಳನ್ನು ನಿರ್ಲಕ್ಷ್ಯ ಮಾಡಿದ್ದರಿಂದ ಭಾರತೀಯ ಸಮಾಜ ಅವ್ಯವಸ್ಥೆ ಕಡೆ ತೆರಳುತ್ತಿದೆ.ಪ್ರತಿಯೊಬ್ಬರೂ ಅವರ ಜೀವನ ಚರಿತ್ರೆ, ಓದಬೇಕು.ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಮುನ್ನುಗ್ಗುವತ್ತ ಯಶಸ್ವಿಯಾಗಬೇಕು ಎಂದು ವಿದ್ಯಾರ್ಥಿಗಳಿಗೆ ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರ ಶಶಿಧರ್ ಮೌರ್ಯ.ನೂರಮ್ಮದ್,ಸಂಪತ್,ದಲಿತ ಮುಕಂಡರಾದ ಗೋವಿನಹಳ್ಳಿ ರವಿ,ಬಿಎಸ್ ಪಿ ತಾಲ್ಲೂಕು ಅದ್ಯಕ್ಷ ಪ್ರಕಾಶ್,ತೆಂಡೆಕೆರೆ ರಮೇಶ್,ಅಮಿತ್,ಸೇರಿದಂತೆ ಹಲವಾರು ವಿದ್ಯಾರ್ಥಿಗಳು ಭಾಗಿಯಾಗಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *