
ಸಕಲೇಶಪುರ : ಪಟ್ಟಣದ ನಂಜಮ್ಮ ಮಹಿಳಾ ಸಮಾಜ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಕೇಂದ್ರ ಸಮಿತಿ ಬೆಂಗಳೂರು ವತಿಯಿಂದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪರಿನಿರ್ವಣದ ಪ್ರಯುಕ್ತ ಶೋಷಿತ ವರ್ಗಗಳ ಸಂಕಲ್ಪ ದಿನವನ್ನು ಆಚರಿಸಲಾಯಿತು
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉದಯಕುಮಾರ್ ರಾಗಿಪುರ ವಹಿಸಿಕೊಂಡು, ಕಾರ್ಯಕ್ರಮವನ್ನು ರಾಜ್ಯ ಸಮಿತಿ ಸಂಚಾಲಕರಾದ ಮಂಜುನಾಥ್ ಅಣ್ಣಯ್ಯನವರ ನೇತೃತ್ವದಲ್ಲಿ ಉದ್ಘಾಟಿಸಲಾಯಿತು.
ಕಾರ್ಯಕ್ರಮ ವನ್ನು ಉದ್ದೇಶಿಸಿ ವಿಭಾಗಿಯ ಸಂಚಾಲಕರಾದ ವಳಲಹಳ್ಳಿ ವೀರೇಶ್ ತನಾಡಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಒಂದೇ ಧರ್ಮ ಒಂದೇ ಜಾತಿಗೆ ಸೀಮಿತವಾಗದೆ ದೇಶದ ಎಲ್ಲಾ ಸರ್ವಜನಾಂಗದವರಿಗೂ ಸಂವಿಧಾನವನ್ನು ಅರ್ಪಿಸಿದ್ದಾರೆಆದರೆ ಸರ್ಕಾರಿ ಕಚೇರಿಗಳಲ್ಲಿ ದಲಿತ ಪರ ಸಂಘಟನೆಗಳು ಮಾತ್ರ ಅವರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಪರಿಸ್ಥಿತಿ ಎದುರಾಗಿದೆ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವಿಚಾರವನ್ನು ಈ ದೇಶಕ್ಕೆ ನೀಡಿದ ಕೊಡುಗೆಯನ್ನು ಸಮಾಜದ ಎಲ್ಲಾ ಸಮುದಾಯದವರಿಗು ತಲುಪುವಂತಾಗಬೇಕು ಎಂದರು.
ಹಿರಿ ಸಂದರ್ಭದಲ್ಲಿ ಬಸವರಾಜ್ ಬೆಳಗೋಡು ಮಾತನಾಡಿ ವರ್ಷದ 365 ದಿನದ ದಿನಗಳಲ್ಲೂ ದೇಶದ ಎಲ್ಲೆಡೆ ಆಚರಿಸುವ ಹುಟ್ಟುಹಬ್ಬ ಹಾಗೂ ವಿಚಾರಗಳ ಬಗ್ಗೆ ಆಚರಿಸುವ ಕಾರ್ಯಕ್ರಮ ಎಂದರೆ ಅದು ಬಾಬಾ ಸಾಹೇಬ್ ಅಂಬೇಡ್ಕರ್ ರವರದಾಗಿರುತ್ತದೆ, ಸಿರಿಟ್ಟಿನಲ್ಲಿ ಅವರ ತತ್ವ ಸಿದ್ಧಾಂತ ಆದರ್ಶಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಂಡು ಹೋಗುವುದರಿಂದ ಆರ್ಥಿಕತೆ ಸಮಾನತೆ ಪಡೆಯಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಚಲಕರದ ಚಿಕ್ಕಣ್ಣ ಆಲೂರು, ಸಂಘಟನಾ ಸಂಚಾಲಕರಾದ ಚಂದ್ರು, ಮೋಹನ್ ಅಚ್ಚರಡಿ, ನಂದಿನಿ ಭರವಸೆ ಸೇರಿದಂತೆ ತಾಲೂಕಿನ ಎಲ್ಲಾ ಪದಾಧಿಕಾರಿಗಳು ಹಾಜರಿದು ಕಾರ್ಯಕ್ರಮ ಯಶಸ್ವಿಯಾಗಿ ನಡೆಸಲಾಯಿತು.
ಈ ಸಂದರ್ಭದಲ್ಲಿ ಮೈಸೂರು ವಿಭಾಗೀಯ ಸಂಚಲಕರಾದ ವಳಲಹಳ್ಳಿ ವೀರೇಶ್, ಜಿಲ್ಲಾ ಸಂಚಲಕರಾದ ಬಸವರಾಜ್ ಬೆಳಗೋಡು, ಜಿಲ್ಲಾ ಸಂಚಾಲಕರಾದ ಚಿಕ್ಕಣ್ಣಆಲೂರು, ನಿವೃತ್ತಾ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಕೊಮಾರಯ್ಯ, ಸಾಹಿತಿ ನಂದಿನಿ,ಭಾಗವಹಿಸಿದ್ದರು



