
ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ರಾಮಮಂದಿರದ ಲೋಕಾರ್ಪಣೆಗೆ ಸಿದ್ಧತೆಗಳು ಜೋರಾಗಿದೆ.
2024ರ ಜನವರಿ 22ರಂದು ರಾಮಮಂದಿರ ಲೋಕಾರ್ಪಣೆ ಆಗುತ್ತಿದ್ದು, ಪೂರ್ವಭಾವಿ ಕಾರ್ಯಗಳು ಈಗಾಗಲೇ ಶುರುವಾಗಿದೆ.
ಅದ್ಧೂರಿ ಸಿದ್ಧತೆಗಳು ಆರಂಭವಾಗಿರುವಾಗಲೇ 600 ಕೆಜಿ ಶುದ್ಧ ನಾಟಿ ತುಪ್ಪ ಅಯೋಧ್ಯೆಯನ್ನು ಬಂದು ತಲುಪಿದೆ.
ರಾಜಸ್ಥಾನದ ಜೋಧಪುರದಿಂದ ಅಯೋಧ್ಯೆಗೆ 600 ಕೆಜಿ ಶುದ್ಧ ನಾಟಿ ತುಪ್ಪವನ್ನು ಎತ್ತಿನಗಾಡಿಯಲ್ಲಿ ಹೊತ್ತು ತರಲಾಗಿದೆ.
ಈ ತುಪ್ಪದಿಂದಲೇ ರಾಮಮಂದಿರದಲ್ಲಿ ಶ್ರೀರಾಮನಿಗೆ ಮೊದಲ ಆರತಿ ನಡೆಯಲಿದೆ. 1000 ಕಿಮೀ ದೂರದಿಂದ ಈ ಶುದ್ಧ ತುಪ್ಪವನ್ನು ಅಯೋಧ್ಯೆಗೆ ಹೊತ್ತು ತರಲಾಗಿದೆ.
ಮುಂದಿನ ಜನವರಿ 22 ರಂದು ರಾಮಮಂದಿರದಲ್ಲಿ ರಾಮಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನಾ ಕಾರ್ಯ ನಡೆಯಲಿದೆ.
ಈ ಲೋಕಾರ್ಪಣೆಗೆ ದೇಶದ ಮೂಲೆ, ಮೂಲೆಯಿಂದ ಹಲವರು ಸೇವಾ ರೂಪದಲ್ಲಿ ಅನೇಕ ವಸ್ತುಗಳನ್ನು ಅಯೋಧ್ಯೆಗೆ ಸಲ್ಲಿಸುತ್ತಿದ್ದಾರೆ.
ಈ ಕಾಣಿಕೆಯ ಭಾಗವಾಗಿ ಜೋಧ್‌ಪುರದಿಂದ ಹಸುವಿನ ಶುದ್ಧ ತುಪ್ಪವನ್ನು ಎತ್ತಿನ ಗಾಡಿಯಲ್ಲಿ ಅಯೋಧ್ಯೆಗೆ ಸಾಗಿಸಲಾಗಿದೆ.
ಹಿಂದೂ ಧಾರ್ಮಿಕ ಆಚರಣೆಯಲ್ಲಿ ಹಸುವಿನ ತುಪ್ಪವನ್ನು ಪವಿತ್ರ ಎಂದು ನಂಬಲಾಗಿದೆ.
ಹೀಗಾಗಿಯೇ ಜೋಧಪುರದಿಂದ ಶುದ್ಧ ನಾಟಿ ತುಪ್ಪವನ್ನು ಅಯೋಧ್ಯೆಗೆ ತರಲಾಗಿದೆ.
ಈ ತುಪ್ಪದಿಂದಲೇ ಶ್ರೀರಾಮನ ಮೊದಲ ಆರತಿ ನಡೆಯಲಿದೆ.
ಇದರ ಜೊತೆಗೆ ಶ್ರೀರಾಮನ ಯಾಗ, ಹೋಮ, ಹವನ ಇತ್ಯಾದಿ ಧಾರ್ಮಿಕ ವಿಧಿ-ವಿಧಾನಗಳನ್ನು ನಡೆಸಲಾಗುತ್ತಿದೆ.
