
ಅರಸೀಕೆರೆ : ತಾಲ್ಲೂಕು ಗಂಡಸಿ ಹೋಬಳಿ ಹಿರಿಸಮುದ್ರ ಗ್ರಾಮದಲ್ಲಿ ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು, ಕೃಷಿ ಮಹಾವಿದ್ಯಾಲಯ ಕಾರೇಕೆರೆ ಹಾಸನದ ಅಂತಿಮ ವರ್ಷದ ಕೃಷಿ ಮತ್ತು ಜೈವಿಕ ತಂತ್ರಜ್ಞಾನದ ವಿಧ್ಯಾರ್ಥಿಗಳು ಅಂಗಾಂಶ ಕೃಷಿ ಬಾಳೆಯ ಪರಿಚಯ ಮತ್ತು ಅಂಗಾಂಶ ಬಾಳೆ ಸಸಿ ಹಂಚುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಅಂಗಾಂಶ ಕೃಷಿ ಬಾಳೆಯನ್ನು ಉತ್ತಮ ಇಳುವರಿ ಕೊಡುವ ರೋಗ ರಹಿತ ಬಾಳೆ ಗಿಡದ ಕಂದುಗಳನ್ನು ಆಯ್ದು ತಂದು ಪ್ರಯೋಗಾಲಯದಲ್ಲಿ ಅಭಿವೃದ್ಧಿ ಪಡಿಸಲಾಗುತ್ತದೆ ಎಂದು ತಿಳಿಸಿದರು. ಅದಾದ ನಂತರ ಅಂಗಾಂಶ ಕೃಷಿ ಬಾಳೆಯನ್ನು ತಯಾರಿಸುವ ಹಂತಗಳನ್ನು ವಿವರಿಸಿದರು. ಅಂಗಾಂಶ ಬಾಳೆ ಮತ್ತು ಸಾಮಾನ್ಯ ಬಾಳೆಯ ನಡುವಿನ ವ್ಯತ್ಯಾಸವನ್ನು ತಿಳಿಸಿದರು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಡಾ. ಕುಮಾರಸ್ವಾಮಿ ಆರ್ ವಿ ಮತ್ತು ಡಾ. ಗೀತಾ ಗೋವಿಂದ, ಸಹಾಯಕ ಪ್ರಾಧ್ಯಾಪಕರು ಜೈವಿಕ ತಂತ್ರಜ್ಞಾನ ವಿಭಾಗ ಕೃಷಿ ಮಹಾವಿದ್ಯಾಲಯ ಕಾರೇಕೆರೆ ಹಾಸನ ,ಇವರು ಆಗಮಿಸಿ ರೈತರಿಗೆ ಅಂಗಾಂಶ ಕೃಷಿ ಬಾಳೆ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದರು. ನಂತರ ರೈತರಿಗೆ ಅಂಗಾಂಶ ಕೃಷಿ ಬಾಳೆ ಸಸಿಗಳನ್ನು ಹಂಚಿದರು.
