
ಕೃಷಿ ವಿಶ್ವವಿದ್ಯಾಲಯ ಬೆಂಗಳೂರು, ಕೃಷಿ ಮಹಾವಿದ್ಯಾಲಯ ಕಾರೆಕೆರೆ ಹಾಸನದ ಅಂತಿಮ ವರ್ಷದ ವಿದ್ಯಾರ್ಥಿಗಳು ಗ್ರಾಮೀಣ ಕಾರ್ಯಾನುಭವ ಶಿಬಿರ 2023-24ರ ಅಂಗವಾಗಿ ಚಗಚಗೆರೆ ಗ್ರಾಮದಲ್ಲಿ ಜೈವಿಕ ಗೊಬ್ಬರಗಳ ಪ್ರಾಮುಖ್ಯತೆ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಜೈವಿಕ ತಂತ್ರಜ್ಞಾನದ ವಿದ್ಯಾರ್ಥಿನಿಯಾದ ದಿವ್ಯ ರವರು ಜೈವಿಕ ಗೊಬ್ಬರಗಳ ಅವಶ್ಯಕತೆ, ಅವುಗಳು ಹೇಗೆ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತವೆ, ಬಳಸುವ ವಿಧಾನ,ಬೆಳೆಗಳ ಇಳುವರಿ ಹೆಚ್ಚಿಸುವಲ್ಲಿ ಜೀವಾಣು ಗೊಬ್ಬರಗಳ ಪಾತ್ರ ಹಾಗೂ ಮಾರುಕಟ್ಟೆ ಲಭ್ಯತೆ ಕುರಿತು ತಾಂತ್ರಿಕ ಮಾಹಿತಿಯನ್ನು ರೈತರಿಗೆ ವಿವರಿಸಿದರು.
ಜೀವಾಣು ಗೊಬ್ಬರಗಳ ಪ್ರಯೋಜನ ಹಾಗೂ ಸೂಕ್ತ ಬಳಕೆಯ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಡಾ.ಭರತ್ ಪ್ರಸಾದ್ ಸಿ ಟಿ ಸಹಾಯಕ ಪ್ರಾಧ್ಯಾಪಕರು ಅಣು ಶಾಸ್ತ್ರ ವಿಭಾಗ ಮತ್ತು ಡಾ.ವಾಗ್ಮರೆ ವಿಜಯ್ ಕುಮಾರ್ ವೀರಪ್ಪ ಸಹಾಯಕ ಪ್ರಾಧ್ಯಾಪಕರು ಸೂಕ್ಷ್ಮ ಜೀವವಿಜ್ಞಾನ ವಿಭಾಗ ಇವರು ರೈತರಲ್ಲಿ ಅರಿವು ಮೂಡಿಸಿದರು.ಕಾರ್ಯಕ್ರಮದಲ್ಲಿ 60 ರೈತರು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಯಾಗಲು ಕಾರಣರಾದರು.
