ಸಕಲೇಶಪುರ :ತಾಲ್ಲೂಕಿನ ಮಾನವ ಹಕ್ಕುಗಳ ರಕ್ಷಣಾ ಸಮಿತಿಯಿಂದ ಸೈನಿಕ ಜೀವನದಿಂದ ಯಶಸ್ವಿಯಾಗಿ 20 ವರ್ಷ ದೇಶ ಸೇವೆ ಮಾಡಿ ನಿವೃತ್ತಿ ಹೊಂದಿದ ಮಧು ಸುಳ್ಳಕಿರವರಿಗೆ ಸನ್ಮಾನವನ್ನು ಇಂದು ಮಾನವ ಹಕ್ಕುಗಳ ರಕ್ಷಣಾ ಸಮಿತಿ ಕಛೇರಿಯಲ್ಲಿ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸೈನಿಕ ಮಧುರವರು ಅವರು ಸೈನಿಕ ಜೀವನವನ್ನು ವಿವರಣೆ ಮಾಡುತ ಹಾಗೆಯೆ ಮುಂದಿನ ದಿನದಲ್ಲಿ ಯುವ ಜನತೆ ಆನ್ಲೈನ್ ಗೇಮ್ ಹಾಗು ಮೊಬೈಲ್ ಬಳಕೆಯಿಂದ ದೂರವಿದು, ಮಾದಕ ವಸ್ತು ಬಳಕೆಯಿಂದ ತ್ಯಜಿಸಿ, ಹೊರಗಣ ಕ್ರೀಡೆಯನ್ನು ಮೈಗೂಡಿಸಿಕೊಂಡು ದೇಹವನ್ನು ಸದೃಢ ಮಾಡಿ ದೇಶ ಸೇವೆಯನ್ನು ಮಾಡಲು ಯಥೇಚ್ಛವಾಗಿ ಯುವಕರು ಮುನ್ನುಗ್ಗಬೇಕು ಎಂದು ಯುವಪೀಳಿಗೆಗೆ ಸಂದೇಶರವಾನೆ ಮಾಡಿದರು.

ಈ ಸಂದರ್ಭದಲ್ಲಿ ಜಿಲಾಧ್ಯಕ್ಷರಾದ ಜೀವನ್ ಗೌಡ. ತಾಲ್ಲೂಕು ಅಧ್ಯಕ್ಷರು ವಿಜಯ್ ಕುಮಾರ್, ಜಿಲ್ಲಾ ಕಾರ್ಯದರ್ಶಿ ಮಹೇಶ್ , ಸಂಘಟನಾ ಮಾರ್ಗದರ್ಶಕರು ಮಚ್ಚೆ ಮಂಜು, ನಗರ ಅಧ್ಯಕ್ಷರು ಸಂತೋಷ್ , ಕಾರ್ಯದರ್ಶಿ ಹನೀಫ್ , ಪ್ರಧಾನ ಕಾರ್ಯದರ್ಶಿ ಮಂಜುನಾಥ್ , ಗ್ರಾಮೀಣ ಅಧ್ಯಕ್ಷರು ಗುಡಾಣಕೆರೆ ವಿಜಿಕುಮಾರ್ , ಆಟೋ ಅಧ್ಯಕ್ಷರು ಮಹೇಶ್ , ನಗರ ಉಸ್ತವಾರಿ ಮಾವಿನಹಳ್ಳಿ ಪ್ರದೀಪ್ , ಹೇಮಂತ್ ಕೆರೋಡಿ, ಬೈಕೆರೆ ಘಟಕ ಸುದರ್ಶನ್, ವೆದುನಂದನ್ , ಕಿರಣ್ , ಮಲೇಶ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *