ಬೆಂಗಳೂರಿನಲ್ಲಿ ಭಾರಿ ದುರಂತವೊಂದು ಸ್ವಲ್ಪದರಲ್ಲಿ ತಪ್ಪಿದೆ.

ಏರ್ ಟೆಲ್ ಟವರ್ ಏಕಾಏಕಿ ಧರೆಗುಳಿದ ಘಟನೆ ಲಗ್ಗೆರೆಯಲ್ಲಿ ನಡೆದಿದೆ.ಕಟ್ಟಡ ನಿರ್ಮಾಣ ಕಾಮಗಾರಿ ವೇಳೆ ಈ ಅವಘಡ ಸಂಭವಿಸಿದೆ.

ಏರ್ ಟೆಲ್ ಟವರ್ ಅಳವಡಿಸಿದ್ದ ಮನೆಯ ಪಕ್ಕದಲ್ಲಿ ಖಾಲಿ ಸೈಟ್ ಇತ್ತು.ಸೈಟ್ ನಲ್ಲಿ ಮಾಲೀಕರು ಮನೆ ಪಾಯಕ್ಕಾಗಿ ಜೆಸಿಬಿಯಿಂದ ಮಣ್ಣು ತೆಗೆಸುತ್ತಿದ್ದರು.

ಈ ವೇಳೆ ಟವರ್ ಇದ್ದ ಮನೆಯ ಪಾಯ ಏಕಾಏಕಿ ಕುಸಿದಿದ್ದು, ನೋಡನೋಡುತ್ತಿದ್ದಂತೆ ಟವರ್ ಧರೆಗುರುಳಿ ಬಿದ್ದಿದೆ.ಟವರ್ ಕೆಳಗೆ ನಿಂತಿದ್ದ ಜನರು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *