
ವಿದ್ಯಾರ್ಥಿಗಳಲ್ಲಿ ಕನ್ನಡ ಭಾಷೆಯ ಅರಿವನ್ನು ಮೂಡಿಸುವ ಉದ್ದೇಶದಿಂದ ಈ ಸ್ಪರ್ಧೆಗಳನ್ನು ಆಯೋಜಿಸಿ ಬಹುಮಾನವನ್ನು ನೀಡಿ ಉತ್ತೇಜಿಸಲಾಯಿತು.
ಸರ್ವಜ್ಞ ಕವಿಯ ವಚನವನ್ನು ವಾಚಿಸಿ ಅರ್ಥ ಹೇಳುವುದು ,ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳ ಕುರಿತು ಭಾಷಣ ಮಾಡುವುದು-ಇವು ಸ್ಪರ್ಧೆಗೆ ನೀಡಿದ್ದ ವಿಚಾರಗಳು.
ಈ ಕಾರ್ಯಕ್ರಮದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀಮತಿ ಶಾರದಾ ಗುರುಮೂರ್ತಿಯವರು, ಕಾರ್ಯಕಾರಿ ಸಮಿತಿಯ ಸದಸ್ಯರಾದ ಶ್ರೀಮತಿ ಮೀನಾಕ್ಷಿ ಖಾದರ್ ಹರೀಶ್ ಗೌರವ ಸಲಹೆಗಾರರಾದ ಬೆಕ್ಕನಹಳ್ಳಿ ನಾಗರಾಜ್ ರವರು ಹಾಗೂ ಕಾಲೇಜಿನ ಪ್ರಾಂಶುಪಾಲರಾದ ವಿ ಪಿ ರಮೇಶ್ ರವರು ಹಾಗೂ ಸಾಹಿತಿಗಳು ಹಾಗೂ ಪತ್ರಕರ್ತರಾದ ವಿಶ್ವಾಸ ಡಿ ಗೌಡ ರವರು ಹಾಗೂ ಕಾಲೇಜಿನ ಆಂಗ್ಲ ಭಾಷಾ ಉಪನ್ಯಾಸಕರಾದ ಶ್ರೀಮತಿ ಎಂ ಚೈತ್ರ ವಿಶ್ವಾಸ್ ರವರು ಹಾಜರಿದ್ದರು.

