
ಆಲೂರು : ತಾಲ್ಲೂಕಿನ ಕೆ ಹೊಸಕೋಟೆ ಹೋಬಳಿಯ ಮಗ್ಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲೇನಹಳ್ಳಿ ಗ್ರಾಮದ ಸುರೇಂದ್ರ ಅಲಿಯಾಸ್ ಅಪ್ಪಣಿ ಎಂಬುವರ ಮೇಲೇ ಬೆಳ್ಳಂಬೆಳಗ್ಗೆ ಕಾಡಾನೆ ದಾಳಿ ಕೂದಲೆಳೆಯ ಅಂತರದಲ್ಲಿ ಪಾರಾದ ರೈತ
ಇಂದು ಬೆಳಿಗ್ಗೆ 8ಗಂಟೆಯ ಸಮಯಲ್ಲಿ ಗದ್ದೆ ಕೆಲಸ ಮಾಡಲು ದ್ವಿಚಕ್ರ ವಾಹನದಲ್ಲಿ ಸಂಚರಿಸುವಾಗ ಇದ್ದಕ್ಕಿದ್ದಂತೆ ಕಾಡಾನೆ ಏಕಾಏಕಿಯಾಗಿ ದ್ವಿಚಕ್ರ ವಾಹನಕ್ಕೆ ಸೊಂಡಿಲನ್ನು ಬಡಿದಿದೆ ಬಡಿದ ಶಬ್ದಕ್ಕೆ ರೈತ ಸುರೇಂದ್ರ ಗಾಬರಿಯಿಂದ ಕಿರುಚಾಟ ಮಾಡಿದಾಗ ಅಲ್ಲೇ ಪಕ್ಕದಲ್ಲಿ ಕಾಫಿ ತೋಟದಲ್ಲಿ ಹಣ್ಣು ಕೊಯ್ಲು ಮಾಡುತ್ತಿದ್ದ ಹತ್ತಾರು ಜನರು ಬಂದು ಕೂಗಾಡಿದಾಗ ಕಾಡಾನೆ ಅಲ್ಲಿಂದ ಹೊರಟು ಹೋಗಿದೆ
ಈ ಘಟನೆ ನಡೆದಾಗ ಅರಣ್ಯ ಇಲಾಖೆ ಸಿಬ್ಬಂದಿ ಅಲ್ಲೆ ಇದ್ದಿದ್ದರಿಂದ ಅರಣ್ಯ ಇಲಾಖೆಯ ವಾಹನದಲ್ಲೆ ಆಲೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಮನೆಗೆ ಬಿಟ್ಟುಹೋಗಿದ್ದರೆ
ಅವರಿಗೆ ಸೊಂಟಕ್ಕೆ ಪೆಟ್ಟಾಗಿದೆ ಹಾಗಾಗಿ ಕೆಲವು ದಿನಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳಲು ವೈದ್ಯರು ತಿಳಿಸಿದ್ದಾರೆ,
ರಘು ಪಾಳ್ಯ ಕರವೇ ಜಿಲ್ಲಾ ಕಾರ್ಯದರ್ಶಿ ಹಾಗೂ ಆಲೂರು ಸಕಲೇಶಪುರ ತಾಲ್ಲೂಕಿನ ಕರವೇ ಉಸ್ತುವಾರಿ ಯವರ ಮನವಿ ಏನಂದರೆ ಕಾಡಾನೆಗಳು ಹಿಂಡು ಎಲ್ಲಿ ಎಲ್ಲಿ ಇದೆ ಎನ್ನುವ ಮಾಹಿತಿ ಇರುತ್ತದೆಯೋ ಅಲ್ಲಿ ರೈತರಿಗೆ ಕೃಷಿ ಚಟುವಟಿಕೆ ಮಾಡಲು ರಕ್ಷಣೆ ಕೊಡಬೇಕು ಅರಣ್ಯ ಇಲಾಖೆಯವರು ಎಂದು ಮನವಿ ಮಾಡಿಕೊಳ್ಳುತ್ತೇವೆ
