
ಅರಸೀಕೆರೆ ತಾಲೂಕು ಗಂಡಸಿ ಹೋಬಳಿ ಹಿರಿಸಮುದ್ರ ಗ್ರಾಮದಲ್ಲಿ ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು, ಕೃಷಿ ಮಹಾವಿದ್ಯಾಲಯ ಕಾರೆಕೆರೆ ಹಾಸನದ ಅಂತಿಮ ವರ್ಷದ ಕೃಷಿ ಹಾಗು ಆಹಾರ ತಂತ್ರಜ್ಞಾನದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಅಂಗವಾಗಿ ಮಾರುಕಟ್ಟೆಯ ಮಾರ್ಗಗಳು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಮಾರುಕಟ್ಟೆಯ ಮಾರ್ಗಗಳು ಎಂದರೆ ಕೃಷಿ ಉತ್ಪನ್ನಗಳನ್ನು ಉತ್ಪಾದಕರಿಂದ ಗ್ರಾಹರಿಗೆ ವರ್ಗಾಯಿಸುವ ಮಾರ್ಗಗಳಾಗಿವೆ.
ಈ ಮಾರುಕಟ್ಟೆಯ ಮಾರ್ಗಗಳು ಗ್ರಾಹಕರ ಬೇಡಿಕೆಯ ರೂಪ ಮತ್ತು ಪ್ರಾದೇಶಿಕ ವಿಶೇಷತೆಯ ಮಟ್ಟವನ್ನು ಅವಲಂಬಿಸಿರುತ್ತದೆ ಎಂದು ತಿಳಿಸಿದರು.
ಕೃಷಿ ಸರಕಗಳು ಉತ್ಪಾದಕರಿಂದ ಗ್ರಾಹಕರನ್ನು ತಲುಪಬೇಕಾದರೆ ಎರಡು ಮಾರ್ಗಗಳಿವೆ ನೇರ ಮಾರ್ಗ ಹಾಗು ಪರೋಕ್ಷ ಮಾರ್ಗ ಅದರಲ್ಲೂ ಪರೋಕ್ಷ ಮಾರ್ಗದಲ್ಲಿಯೇ ಹೆಚ್ಚು ಉತ್ಪನ್ನಗಳು ಮಾರಾಟವಾಗುವುವು ಎಂದು ತಿಳಿಸಿಕೊಟ್ಟರು ,
ಹಾಗೆಯೇ ಮಾರುಕಟ್ಟೆ ಮಾರ್ಗಗಳ ಪ್ರಾಮುಖ್ಯತೆ, ಸಿರಿಧಾನ್ಯಗಳ, ಹಣ್ಣುಗಳು, ಎಣ್ಣೇಬೀಜಗಳು, ಹಾಲಿನ, ತೆಂಗಿನ ಮಾರುಕಟ್ಟೆ ಮಾರ್ಗಗಳ ಬಗ್ಗೆ ತಿಳಿಸಿಕೊಟ್ಟರು
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಡಾ.ಶಶಿಕಿರಣ್ ಎ.ಎಸ್. ಸಹಾಯಕ ಪ್ರಾಧ್ಯಾಪಕರು, ಕೃಷಿ ಅರ್ಥಶಾಸ್ತ್ರ ಕೃಷಿ ಮಹಾವಿದ್ಯಾಲಯ ಕಾರೆಕೆರೆ ಹಾಸನ ಇವರು ಆಗಮಿಸಿ ರೈತರಿಗೆ ಹೆಚ್ಚಿನ ಮಾಹಿತಿ ನೀಡಿದರು.
