ಹಾಸನ : ಕೃಷಿ ವಿಶ್ವವಿದ್ಯಾಲಯ , ಬೆಂಗಳೂರು, ಕೃಷಿ ಮಹಾವಿದ್ಯಾಲಯ, ಕಾರೇಕೆರೆ ,ಹಾಸನ , ಪಶು ವೈದ್ಯಕೀಯ ಮಹಾವಿದ್ಯಾಲಯ , ಹಾಸನ ಪಶು ಸಂಗೋಪನಾ ಇಲಾಖೆ , ಅರಸೀಕೆರೆ , ಹಿರಿಯ ವಿದ್ಯಾರ್ಥಿಗಳ ಸಂಘ ಯು ಎ ಎಸ್ ಬೆಂಗಳೂರು ಹಾಗೂ ಕೃಷಿ ತಂತ್ರಜ್ಞರ ಸಂಸ್ಥೆ ಹಾಸನ ಘಟಕ ಇವರ ಸಂಯುಕ್ತಾಶ್ರಯದಲ್ಲಿ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ 2023-24 ರ ಅಂಗವಾಗಿ ‘ಪಶು ಆರೋಗ್ಯ ತಪಾಸಣಾ ಶಿಬಿರ’ ಕಾರ್ಯಕ್ರಮವನ್ನು ದೊಡ್ಡಯರಗನಾಳು ಗ್ರಾಮದಲ್ಲಿ ಆಯೋಜಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಡಾ. ಎಸ್ ಎನ್ ವಾಸುದೇವನ್ ಡೀನ್ ( ಕೃಷಿ), ಕೃಷಿ ಮಹಾವಿದ್ಯಾಲಯ ಹಾಸನ ಇವರು ಆಗಮಿಸಿದ್ದರು.ಗೌರವಾನ್ವಿತ ಡೀನ್ ರವರು ರಾಸುವಿಗೆ ಜಂತುಹುಳುವಿನ ನಿವಾರಣೆಯ ಲಸಿಕೆಯನ್ನು ನೀಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ರೈತರ ಸಾಕು ಪ್ರಾಣಿಗಳಾದ ಹಸು, ಎಮ್ಮೆ, ಎತ್ತು, ಕುರಿ, ಮೇಕೆ, ಕೋಳಿ ನಾಯಿ ಮುಂತಾದವುಗಳಿಗೆ ಉಚಿತ ಆರೋಗ್ಯ ತಪಾಸಣೆ ನೀಡಲು ಈ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.

ಶಿಬಿರದಲ್ಲಿ ಪಶುಗಳ ಸಮಸ್ಯೆಗಳಾದ ಗರ್ಭಪಾತ, ಚರ್ಮದಲ್ಲಿನ ಗಂಟು ರೋಗ, ಜ್ವರ, ಕೆಮ್ಮು ಮುಂತಾದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲಾಯಿತು.

ಶಿಬಿರದಲ್ಲಿ ಒಟ್ಟು 68 ಹಸುಗಳು, 9 ಎಮ್ಮೆಗಳು, 8 ಕರುಗಳು, 25 ಕುರಿಗಳು, 33 ಮೇಕೆಗಳು ಹಾಗೂ 2 ನಾಯಿಗಳಿಗೆ ಚಿಕಿತ್ಸೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಪಶು ಮಹಾವಿದ್ಯಾಲಯ, ಹಾಸನದ ಪಶುವೈದ್ಯರುಗಳಾದ ಡಾ. ಶಂಕರೇಗೌಡ, ಡಾ. ವೆಂಕಟೇಶ್, ಡಾ. ಅಶ್ವಿನಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದು ಪಶುಗಳಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಿದರು.

ಕಾರ್ಯಕ್ರಮದಲ್ಲಿ ಕೃಷಿ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರುಗಳಾದ ಡಾ. ಶಂಕರ ಎಂ ಎಚ್, ಡಾ. ನವೀನ್ ಕುಮಾರ್ ಪಿ, ಡಾ. ಸದಾಶಿವನಗೌಡ ಎಸ್.ಎನ್. ಓ ರವರು ಹಾಗೂ ಮನು, Sky-EC ಡ್ರಗ್ಸ್ ಅಂಡ್ ಫಾರ್ಮಸ್ಯುಟಿಕಲ್ಸ್ ಪ್ರೈವೇಟ್ ಲಿಮಿಟೆಡ್, ಪಿರು ಬಿರದಾರ್, ZenX ಅನಿಮಲ್ ಹೆಲ್ತ್ ಪ್ರೈವೇಟ್ ಲಿಮಿಟೆಡ್ , ಸುದೀಪ್ ,ಪಶುವೈದ್ಯಕೀಯ ಇನ್ಸ್ಪೆಕ್ಟರ್ ಇವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರು ಹಾಗೂ ಗ್ರಾಮಸ್ಥರು ಹಾಜರಿದ್ದು ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *