ಹಾಸನ: ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಅಡಿಯಲ್ಲಿ ಬರುವ ಕೃಷಿ ಮಹಾವಿದ್ಯಾಲಯ, ಕಾರೇಕೆರೆ, ಹಾಸನದ ವತಿಯಿಂದ ಆಯೋಜಿಸಲಾದ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ 2023-24ರ ಅಂಗವಾಗಿ ಅಂತಿಮ ವರ್ಷದ ಆಹಾರ ತಂತ್ರಜ್ಞಾನ ವಿದ್ಯಾರ್ಥಿಗಳಿಂದ ದೊಡ್ದಯರಗನಾಳು ಗ್ರಾಮದಲ್ಲಿ ‘ರಾಗಿಯ ಮೌಲ್ಯವರ್ಧಿತ ಉತ್ಪನ್ನಗಳʼ ಕುರಿತಾದ ಅರಿವು ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಡಾ.ಶಶಿಕುಮಾರ.ಜೆ.ಎನ್. ರವರು ಆಗಮಿಸಿದ್ದರು. ರಾಗಿಯಲ್ಲಿರುವ ಪೋಷಕಾಂಶಗಳ ಹಾಗೂ ರಾಗಿಯ ಪ್ರಾಮುಖ್ಯದ ಬಗ್ಗೆ ವಿದ್ಯಾರ್ಥಿನಿಯಾದ ಪ್ರಗತಿ.ಎಸ್.ವಿ. ಯವರು ತಿಳಿಸಿದರು.

ರಾಗಿಯ ಮೌಲ್ಯವರ್ಧಿತ ಉತ್ಪನಗಳಾದ ರಾಗಿ ಲಡ್ಡು ,ರಾಗಿ ಹಾಲು,ರಾಗಿ ಚಕ್ಕುಲಿ, ರಾಗಿ ಮಾಲ್ಟ್ ತಯಾರಿಕೆಯ ಬಗ್ಗೆ ವಿದ್ಯಾರ್ಥಿಯಾದ ವಿನಾಯಕ.ಕೆ.ಬಿ. ರವರು ತಿಳಿಸಿದರು.

ನಂತರ ಸಂಪನ್ಮೂಲ ವ್ಯಕ್ತಿಗಳು ನೇರವಾಗಿ ಜನರೊಂದಿಗೆ ಚರ್ಚೆಯನ್ನು ನಡೆಸಿ ರಾಗಿಯ ವಿವಿಧ ಉತ್ಪನ್ನಗಳ ತಯಾರಿಕೆ ಹಾಗೂ ಅದರ ಮಹತ್ವವನ್ನು ತಿಳಿಸಿದರು.

ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳು ತಾವೇ ಸ್ವತಃ ತಯಾರಿಸಿದ ಪೌಷ್ಟಿಕ ರಾಗಿ ಲಡ್ಡುಗಳನ್ನು ಗ್ರಾಮಸ್ಥರಿಗೆ ವಿತರಿಸದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *