ಹಾಸನ: ನಗರದ ಹೊಸ ಬಸ್ ನಿಲ್ದಾಣ ಪಕ್ಕ ಇರುವ, ರಾಜಕೀಯದ ಇಹನ್ನಲೆಯಲ್ಲಿ ಮೂಲೆ ಗುಂಪಾಗಿರುವ ಚನ್ನಪಟ್ಟಣ ಪ್ರವಾಸಿತಾಣವನ್ನು ಜಿಲ್ಲಾ ಮಂತ್ರಿಗಳಾದ ಕೆ.ಎನ್. ರಾಜಣ್ಣ ಅವರು ವೀಕ್ಷಣೆ ಮಾಡಿದಲ್ಲದೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ, ದೂರವಾಣಿ ಕರೆಯಲ್ಲಿ ಅಧಿಕಾರಿ ಓರ್ವರ ಜೊತೆ ಮಾತನಾಡುವಾಗ ಗರಂ ಆಗಿದಲ್ಲದೇ, ನಂತರ ಈ ಜಾಗವನ್ನು ಅಭಿವೃದ್ಧಿಗೊಳಿಸಿ ಜನವರಿ ತಿಂಗಳಲ್ಲಿ ಈ ಪ್ರವಾಸಿ ತಾಣವನ್ನು ಇಲಾಖೆ ಸಚಿವರಿಂದ ಉದ್ಘಾಟಿಸಿ ಪ್ರವಾಸಿಗರಿಗೆ ಅವಕಾಶ ಕಲ್ಪಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಮಾಧ್ಯಮಕ್ಕೆ ಭರವಸೆ ನೀಡಿದರು.

ಇದೆ ವೇಳೆ ಮಾಧ್ಯಮದೊಂದಿಗೆ ಮಾತನಾಡುತ್ತಾ, ಮಕ್ಕಳ ಮತ್ತು ಮಹಿಳಾ ಇಲಾಖೆಗೆ ಸೇರಿದೆ ಎಂಬುದು ಒಂದು, ಎರಡನೆಯದು ಇದಕ್ಕೆಲ್ಲಾ ವೆಚ್ಚ ಕೊಟ್ಟಿರುವುದು ಪ್ರವಾಸೋಧ್ಯಮ ಇಲಾಖೆಯವರು. ಸುತ್ತ ಕಟ್ಟಡ ನಿರ್ಮಿಸಿದ್ದಾರೆ. ಎಲ್ಲಾ ಕೆಲಸವನ್ನು ಜಾಗರುಕತೆಯಿಂದ ಮುಗಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಮುಂದಿನ ತಿಂಗಳ ಮೊದಲ ವಾರ ಇಲ್ಲವೇ ಎರಡನೇ ವಾರದಲ್ಲಿ ಟೂರಿಸಂ ಇಲಾಖೆ ಸಚಿವರನ್ನೆ ಕರೆಯಿಸಿ ಈ ಕಟ್ಟಡವನ್ನು ಉದ್ಘಾಟನೆ ಮಾಡಿಸಲಾಗುವುದು.

ಈತರ ಕೆಲಸ ಆಗದೆ ಬಹಳವರ್ಷ ಉದ್ಘಾಟನೆಯಾಗದೆ ಆಗೆ ಉಳಿದಿರುವ ಹೆಚ್ಚು ಈ ಜಿಲ್ಲೆಯಲ್ಲಿದ್ದು, ಮುಖ್ಯಮಂತ್ರಿಗಳನ್ನು ಕರೆದುಕೊಂಡು ಬಂದು ಈ ಟೌನ್ ನಲ್ಲಿ ಇರುವಂತಹ ಎಲ್ಲಾ ಕೆಲಸವನ್ನು ಕೂಡ ಮುಗಿಸಿ ಶೀಘ್ರ ಉದ್ಘಾಟನೆಯಾಗಬೇಕು ಮಾಡಿಸುತ್ತೇನೆ ಎಂದರು.

ಈ ಜಾಗಕ್ಕೆ ಯುಜಿಡಿ ನೀರು ಬಾರದಂತೆ ತಪ್ಪಿಸಬೇಕು. ಈ ನಿಟ್ಟಿನಲ್ಲಿ ನಗರಸಭೆ ಆಯುಕ್ತರಿಗೆ ಸೂಚಿಸಲಾಗಿದೆ. ಈ ಜಾಗದಲ್ಲಿ ಫ್ರೆಶ್ ವಾಟರ್ ತುಂಬಿಸಬೇಕು.

ಈ ಭಾಗವನ್ನು ಅಭಿವೃದ್ಧಿ ಮಾಡಿ ಪ್ರವಾಸಿ ಸ್ಥಳವನ್ನಾಗಿ ಮಾಡಬೇಕು ಎಂದು ಈ ಸ್ಥಳ ನೋಡಿದ ಮೇಲೆ ನನಗೆ ಬಂದಿರುವ ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸಿ. ಸತ್ಯಭಾಮ, ಅಪರ ಜಿಲ್ಲಾಧಿಕಾರಿ ಶಾಂತಲಾ, ಜಿಲ್ಲಾ ಪಂಚಾಯತ್ ಮುಖ್ಯಕಾರ‍್ಯನಿರ್ವಹಣಾಧಿಕಾರಿ ಪೂರ್ಣಿಮಾ, ಉಪವಿಭಾಗಧಿಕಾರಿ ಮಾರುತಿ, ನಗರಸಭೆ ಆಯುಕ್ತ ಸತೀಶ್ ಕುಮಾರ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *