
ಸಕಲೇಶಪುರ : ತಾಲೂಕಿನ ತಾಲೂಕು ಪಂಚಾಯಿತಿ ಸಾಮರ್ಥ್ಯ ಸೌಧದಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಆದೇಶದನ್ವಯ ಅಬ್ದುಲ್ ನಝೀರ್ ಸಾಬ್ ರಾಜ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ ಮೈಸೂರು,( ಆರ್ ಡಿ ಪಿ ಆರ್) ವತಿಯಿಂದ ಗ್ರಾಮ ಪಂಚಾಯತಿ ಚುನಾಯಿತ ಮಹಿಳಾ ಪ್ರತಿನಿಧಿಗಳ ಸಾಮರ್ಥ್ಯ ಅಭಿವೃದ್ಧಿ ತರಬೇತಿ ಗಾರವನ್ನು ಏರ್ಪಡಿಸಲಾಗಿದ್ದು,
ಗ್ರಾಮ ಪಂಚಾಯತಿ ಚುನಾಯಿತ ಮಹಿಳಾ ಸದಸ್ಯರುಗಳಿಗೆ ಸಾಮರ್ಥ್ಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಮೂರು ದಿನಗಳ ತರಬೇತಿ ಕಾರ್ಯಗಾರವನ್ನು ಹಮ್ಮಿಕೊಂಡು, ಮಹಿಳೆಯರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಆಡಳಿತ, ರಾಜಕೀಯ, ಸದೃಢತೆಗೆ ಸಂಬಂಧಿಸಿದಂತೆ ಈ ಮೂರು ದಿನಗಳಲ್ಲಿ ಸುಮಾರು 14 ಅಧಿವೇಶನಗಳು ಹಾಗೂ ಪೂರಕವಾದ ಚಟುವಟಿಕೆಗಳ ಮೂಲಕ ಮಹಿಳೆಯರ ಸಬಲೀಕರಣಕ್ಕೆ ತರಬೇತಿ ನೀಡಲಾಗುತ್ತಿದ್ದು,
ಕುಟುಂಬದಲ್ಲಿ, ಗ್ರಾಮೀಣ ಪ್ರದೇಶದಲ್ಲಿ, ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಮೇಲಾಗುವ ದೌರ್ಜನ್ಯಗಳು, ಲೈಂಗಿಕ ದೌರ್ಜನ್ಯಗಳ ತಡೆ ಕಾಯ್ದೆ ಬಗ್ಗೆ, ಬಾಲ್ಯ ವಿವಾಹ, ಬಾಲ ವಿಕಾಸ ಕುರಿತು, ಹಣಕಾಸು ಯೋಜನೆ ಮತ್ತು ಲೆಕ್ಕ ಪರಿಶೋಧನಾ ಸ್ಥಾಯಿ ಸಮಿತಿ, ಗ್ರಾಮ ಸಭೆಗಳು, ಸಂಜೀವಿನಿ ಯೋಜನೆಯಡಿ ಬರುವಂತಹ ಉದ್ಯೋಗಾವಕಾಶ, ಗ್ರಾಮ ಪಂಚಾಯತಿಯಲ್ಲಿನ ನಿರ್ಧಾರಗಳು, ಗ್ರಾಮಗಳ ಅಭಿವೃದ್ಧಿ ಕಾರ್ಯಗಳು, ಗ್ರಾಮದ ಉನ್ನತ ವಿದ್ಯಾಭ್ಯಾಸದಲ್ಲಿ ತೊಡಗಿರುವ ವಿದ್ಯಾರ್ಥಿಗಳಿಗೆ ಉತ್ತೇಜನಗಳ ಬಗ್ಗೆ ಹೀಗೆ ಹಲವಾರು ಮಹಿಳಾ ಸಬಲೀಕರಣಕ್ಕಾಗಿ ತೊಡಗಿಸಿಕೊಂಡ ಕಾರ್ಯಕ್ರಮಗಳ ಬಗ್ಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಹಾಗೂ ಆರ್‌ಡಿಪಿಆರ್ ಸಂಪನ್ಮೂಲ ವ್ಯಕ್ತಿಗಳಾದ ಲಕ್ಷ್ಮೀಶ್ ರವರಿಂದ ಪರಿಣಾಮಕಾರಿಯಾಗಿ ತರಬೇತಿ ಕಾರ್ಯಗಾರ ಮೂಡಿಬಂದಿದ್ದು,
ಶಿಬಿರಾರ್ಥಿಗಳಿಂದಲೂ ಉತ್ತಮ ಪ್ರತಿಕ್ರಿಯೆ ತರಬೇತಿ ಬಗ್ಗೆ ಹಾಗೂ ತರಬೇತಿ ಆಯೋಜನೆ ಮಾಡಿದ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ ಮೈಸೂರು ವತಿಯಿಂದ ಒಳ್ಳೆಯ ಅಭಿವೃದ್ಧಿ ಅಭಿಪ್ರಾಯವನ್ನು ವ್ಯಕ್ತಪಡಿಸಿರುತ್ತಾರೆ,
ವಿಕೇಂದ್ರಿಕೃತ ತರಬೇತಿ ಸಕಲೇಶಪುರ ತಾಲೂಕು ಸಂಯೋಜಕರು ಶ್ರೀಮತಿ ಭಾರತಿ ರವರು ಉಪಸ್ಥಿತರಿದ್ದು ತರಬೇತಿ ಯಶಸ್ವಿಯಾಗಿ ನಡೆಸಿಕೊಟ್ಟಿರುತ್ತಾರೆ.
ಈ ಸಂದರ್ಭದಲ್ಲಿ ಎಲ್ಲ ಗ್ರಾಮ ಪಂಚಾಯತಿಯ ಮಹಿಳಾ ಅಧ್ಯಕ್ಷರು, ಉಪಾಧ್ಯಕ್ಷರು ಸದಸ್ಯರುಗಳು, ಹಾಜರಿದ್ದರು.





