ಬೇಲೂರು : ತಾಲೂಕು ಕಾಫಿ ಬೆಳೆಗಾರರ ಸಂಘದಿಂದ ಕಾಫಿ ಮಂಡಳಿಯ ನೂತನ ಅಧ್ಯಕ್ಷರಾದ ಶ್ರೀ ಎಂ.ಜೆ. ದಿನೇಶ್ ರವರನ್ನು ಅಬಿನಂದಿಸಲಾಯಿತು

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅಧ್ಯಕ್ಷರು ಕಾಫಿ ಬೆಳೆಗಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವಿಶೇಷ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದ ಅವರು ಭಾರತದ ಕಾಫಿಗೆ ವಿಶೇಷ ಬೇಡಿಕೆ ಇದೆ ಇತರೇ ದೇಶದ ಕಾಫಿ ಬೆಳೆಗಾರರು ಬಯಲು ಪ್ರದೇಶದಲ್ಲಿ ಕಾಫಿ ಕೃಷಿ ಮಾಡುತ್ತಿದ್ದಾರೆ ನಮ್ಮ ದೇಶದಲ್ಲಿ ನೆರಳಿನ ಆಶ್ರಯ ಕಾಫಿ ಮತ್ತು ಹವಾಗುಣ ಅನುಕೂಲಕರವಾಗಿದೆ ಎಂದರು ಕಾಫಿ ಮಂಡಳಿಯು ನೂತನ ಆವಿಷ್ಕಾರ ಅಳವಡಿಸುವ ಬಗ್ಗೆ ಹೆಚ್ಚಿನ ಒತ್ತು ನೀಡುತ್ತದೆ ಎಂದರು ಹಾಗೂ ನೀರಾವರಿ ಯೋಜನೆಗೆ ಆಧ್ಯತೆ ನೀಡಲಾಗುವುದು ಎಂದು ತಿಳಿಸಿದರು

ಈ ಸಂದರ್ಭದಲ್ಲಿ ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ಅಧ್ಯಕ್ಷ ಕೆ.ಎನ್. ಸುಬ್ರಮಣ್ಯ ಜನವರಿ ತಿಂಗಳಲ್ಲಿ ಪ್ಲಾಂಟರ್ಸ್ ಸಂಘದ ವಾರ್ಷಿಕ ಮಹಾಸಭೆ ಬಗ್ಗೆ ಮಾಹಿತಿ ನೀಡಿದರು

ಈ ಸಂದರ್ಭದಲ್ಲಿ ಹೆಚ್ ಡಿ ಪಿ ಎ ಮಾಜಿ ಅಧ್ಯಕ್ಷರಾದ ತೋ ಚ ಅನಂತ ಸುಬ್ಬರಾವ್ ಮಾಜಿ ತಾಲೂಕು ಅಧ್ಯಕ್ಷರುಗಳಾದ ಕೌರಿ ರಾಜಶೇಖರ್,ಜೆ ಸಿ ಶೇಖರ್,ಹೆಚ್ ಎಸ್ ಗೋವಿಂದ ಶೆಟ್ಟಿ, ಕಾರ್ಯದರ್ಶಿ ಕೌರಿ ಸಂಜಯ್, ವೆಂಕಟೇಶ್ ವೇದರಾಜ್ ಮತ್ತು ಪದಾಧಿಕಾರಿಗಳು ಕಾಫಿ ಬೆಳೆಗಾರರು ಭಾಗವಹಿಸಿದ್ದರು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *