
*ರಾಗಿ ಮೌಲ್ಯವರ್ಧಿತ* *ಉತ್ಪನ್ನಗಳು*
ಅರಸೀಕೆರೆ : ತಾಲ್ಲೂಕು ಗಂಡಸಿ ಹೋಬಳಿ ಹಿರಿಸಮುದ್ರ ಗ್ರಾಮದಲ್ಲಿ ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು, ಕೃಷಿ ಮಹಾವಿದ್ಯಾಲಯ ಕಾರೆಕೆರೆ ಹಾಸನದ ವತಿಯಿಂದ ಆಯೋಜಿಸಲಾಗಿದ, ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ 2023-24ರ ಅಂಗವಾಗಿ ಅಂತಿಮ ವರ್ಷದ ಕೃಷಿ ಮತ್ತು ಆಹಾರ ತಂತ್ರಜ್ಞಾನ ವಿದ್ಯಾರ್ಥಿಗಳು ರಾಗಿ ಮೌಲ್ಯವರ್ಧನೆ ಬಗ್ಗೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಈ ಕಾರ್ಯಕ್ರಮದಲ್ಲಿ ಪ್ರಮುಖವಾಗಿ ರಾಗಿಯಲ್ಲಿನ ಪೌಷ್ಟಿಕಾಂಶದ ಸಂಯೋಜನೆ ಅದರಲ್ಲಿ ಮಾಡಬಹುದಾದ ವಿವಿಧ ಉತ್ಪನ್ನಗಳಾದ ರಾಗಿ ಚಕ್ಕಲಿ, ರಾಗಿ ಬರ್ಫಿ,ರಾಗಿ ಮಾಲ್ಟ್,ರಾಗಿ ಲಡ್ಡು ಇತ್ಯಾದಿಗಳನ್ನು ರಾಗಿ ಲಡ್ಡು ಮಾಡುವ ವಿಧಾನವನ್ನು ತಿಳಿಸಿದರು
ತಯಾರಿಸುವ ವಿಧಾನ : ಒಂದು ಕಪ್ ರಾಗಿ ಹಿಟ್ಟು ಒಂದು ಕಪ್ ಕಡ್ಲೆ ಹಿಟ್ಟನ್ನು ತುಪ್ಪದೊಂದಿಗೆ ಬೆರೆಸಿ ಗಮ ಬರುವವರೆಗೂ ಚೆನ್ನಾಗಿ ಉರಿದಿಟ್ಟುಕೊಳ್ಳಬೇಕು. ನಂತರ ಒಂದು ಕಪ್ ಸಕ್ಕರೆ ಪುಡಿಯನ್ನು ಮಿಶ್ರಿಸಿ ಜೊತೆಗೆ ಐದು ಗ್ರಾಂ ಏಲಕ್ಕಿ ಪುಡಿಯನ್ನು ಬೆರೆಸಿ ಬೇಕಾದ ಗಾತ್ರಕ್ಕೆ ಉಂಡೆ ಕಟ್ಟುವುದು) ವಿಡಿಯೋದ ಮೂಲಕ ಸುಲಭವಾಗಿ ವಿವರಿಸಲಾಯಿತು.
ನಂತರ ವಿದ್ಯಾರ್ಥಿಗಳೇ ಸ್ವತಃ ತಯಾರಿಸಿದ ರಾಗಿ ಲಡ್ಡುವನ್ನು ಗ್ರಾಮಸ್ಥರಿಗೆ ನೀಡಿ ಅವರ ಅನಿಸಿಕೆಗಳನ್ನು ಕಲೆ ಹಾಕಿದರು.
ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಡಾ.ಬನು ದೇಶಪಾಂಡೆ ಪ್ರಾಧ್ಯಾಪಕರು ಆಹಾರ ವಿಜ್ಞಾನ ಹಾಗೂ ಪೌಷ್ಠಿಕತೆ ಇವರು ಈ ಕಾರ್ಯಕ್ರಮವನ್ನು ಉದ್ದೇಶಿಸಿ ರೈತ ಬಾಂಧವರೊಂದಿಗೆ ಮಾತನಾಡಿದರು.
ಈ ಕಾರ್ಯಕ್ರಮಕ್ಕೆ ಸರಿ ಸುಮಾರು 63 ರೈತರು ಭಾಗಿಯಾಗಿದ್ದರು
