
ಸಕಲೇಶಪುರ : ತಾಲೂಕಿನ ಕೆರೋಡಿ ಗ್ರಾಮದ ಮಾರ್ಗವಾಗಿ ಕೊಡಲಿಪೇಟೆ ಮಡಿಕೇರಿಗೆ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು, ಕೆರೋಡಿ ಗ್ರಾಮದ ಹತ್ತಿರ ಡಾಂಬರ್ ರಸ್ತೆ ಅಲ್ಲಲ್ಲಿ ಕಿತ್ತು ಹೋಗಿದ್ದು ಗುಂಡಿಗಳಾಗಿರುವ ಪರಿಣಾಮ ಪ್ರತಿನಿತ್ಯ ಒಂದಲ್ಲ ಒಂದು ಅನಾಹುತಗಳು ಎದುರಾಗುತ್ತಲೇ ಇವೆ .
ಇದುವರೆಗೂ ರಸ್ತೆ ಅಭಿವೃದ್ಧಿ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿರುವುದಿಲ್ಲಾ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ ರಸ್ತೆ ದುರಸ್ತಿ ಮಾಡಿಕೊಡಬೇಕಾಗಿ ಗ್ರಾಮಸ್ಥರು ಆಗ್ರಹಿಸುತ್ತಾರೆ.
ಈ ಸಂದರ್ಭದಲ್ಲಿ ಚಂದ್ರಣ್ಣ ಯಸಳುರು, ಗ್ರಾಮಸ್ಥರಾದ ಮಂಜುನಾಥ್, ಶಿವಕುಮಾರ್, ವೆಂಕಟೇಶ್,ಚಂದನ್, ಇತರರು ಹಾಜರಿದ್ದರು.



