ಹಾಸನ: ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಅಡಿಯಲ್ಲಿ ಬರುವ ಕೃಷಿ ಮಹಾವಿದ್ಯಾಲಯ, ಕಾರೇಕೆರೆ, ಹಾಸನದ ವತಿಯಿಂದ ಆಯೋಜಿಸಲಾದ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ 2023-24ರ ಅಂಗವಾಗಿ ಅಂತಿಮ ವರ್ಷದ ಕೃಷಿ ವಿದ್ಯಾರ್ಥಿಗಳಿಂದ ದೊಡ್ದಯರಗನಾಳು ಗ್ರಾಮದಲ್ಲಿ ‘ರಾಗಿ ಮತ್ತು ಮೆಕ್ಕೆಜೋಳದ ಸುಧಾರಿತ ತಳಿಗಳ ಜಾಗೃತಿ’ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಅನುವಂಶೀಯತೆ ಹಾಗೂ ಸಸ್ಯ ತಳಿ ಅಭಿವೃದ್ಧಿ ತಜ್ಞರಾದ ಡಾ. ಶಶಿಧರ . ಕೆ.ಎಸ್ ರವರು ಆಗಮಿಸಿದ್ದರು.

ರಾಗಿಯ ಸುಧಾರಿತ ತಳಿಗಳು ಹಾಗೂ ಅವುಗಳ ವಿಶಿಷ್ಟತೆಯ ಬಗ್ಗೆ ವಿಧ್ಯಾರ್ಥಿಯಾದ ಯಶವಂತ್ ರವರು ತಿಳಿಸಿದರು. ಜೋಳದ ಸುಧಾರಿತ ತಳಿಗಳು ಹಾಗೂ ಅವುಗಳ ವಿಶೇಷತೆಯ ಕುರಿತು ವಿಧ್ಯಾರ್ಥಿಯಾದ ಸತೀಶ್ ರವರು ತಿಳಿಸಿದರು.ಸಂಪನ್ಮೂಲ ವ್ಯಕ್ತಿಗಳಾದ ಡಾ.ಶಶಿಧರ.ಕೆ.ಎಸ್ ರವರು ಅಧಿಕ ಇಳುವರಿ ಪಡೆಯುವಲ್ಲಿ ಹೊಸ ತಳಿಗಳನ್ನು ಬಳಸುವುದು ಅತಿ ಮುಖ್ಯವೆಂದು ತಿಳಿಸಿದರು ಹಾಗೂ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಿಂದ ಬಿಡುಗಡೆಯಾಗಿರುವ ತಳಿಗಳ ವಿಶೇಷತೆಯ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಿಂದ ರೈತರಿಗೆ ಬಹಳಷ್ಟು ಉಪಯುಕ್ತ ಮಾಹಿತಿಯನ್ನು ನೀಡಲಾಯಿತು.ಕಾರ್ಯಕ್ರಮದಲ್ಲಿ ಅನೇಕ ಸಂಖ್ಯೆಯಲ್ಲಿ ಗ್ರಾಮದ ರೈತರು ಹಾಜರಿದ್ದು ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *