
ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ಆಹಾರ ತಂತ್ರಜ್ಞಾನ ವಿದ್ಯಾರ್ಥಿಗಳಿಂದ ಗ್ರಾಮೀಣ ಕೃಷಿ ಕರ್ಯಾನುಭವ ಶಿಬಿರದ ಅಂಗವಾಗಿ ಆಹಾರ ಸಂರಕ್ಷಣೆ ಮತ್ತು ಅದರ ವಿಧಾನದ ಬಗ್ಗೆ ಕಾರ್ಯಕ್ರಮವನ್ನು ಚಗಚಗೆರೆ ಗ್ರಾಮದ ಸಮುದಾಯ ಭವನದ ಮುಂದೆ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಆಹಾರವನ್ನು ಸಂರಕ್ಷಣೆ ಮಾಡುವುದು ಹೇಗೆ ಹಾಗೂ ಸಂರಕ್ಷಣೆ ಮಾಡುವ ವಿಧಾನದ ಬಗ್ಗೆ ವಿಸ್ತಾರವಾಗಿ ವಿವರಣೆ ನೀಡಲಾಯಿತು. ಮತ್ತು ಕಾರ್ಯಕ್ರಮದಲ್ಲಿ ಕೃಷಿ ಕಾಲೇಜಿನ ಆಹಾರ ತಂತ್ರಜ್ಞಾನ ವಿಭಾಗದ ಪ್ರಾಧ್ಯಾಪಕರಾದಂತ Dr. ಅನಿತಾ ರವರು ಕಾರ್ಯಕ್ರಮವನ್ನು ಕುರಿತು ಮಾಹಿತಿ ನೀಡಿದರು
ಕೊನೆಯಲ್ಲಿ ರಾಜ್ಯ ಸರ್ಕಾರದ ಮತ್ತು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಆಹಾರ ಸಂರಕ್ಷಣೆಯ ಯೋಜನೆಗಳನ್ನು ತಿಳಿಸಿ ಆಹಾರ ಸಂರಕ್ಷಣೆಯ ಬಗ್ಗೆ ಅವರಿಗಿದ್ದ ಗೊಂದಲಗಳನ್ನು ಬಗೆಹರಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಸಿರಿಧಾನ್ಯಗಳ ವರ್ಷ 2023 ಪ್ರಯುಕ್ತ ರಾಗಿ ಲಡ್ಡುಗಳು ಅಂತಿಮ ವರ್ಷದ ಆಹಾರ ತಂತ್ರಜ್ಞಾನ ವಿದ್ಯಾರ್ಥಿಗಳು ಸ್ವತಃ ತಯಾರಿಸಿ ವಿಸ್ತರಿಸಿದರು.
ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಡಾ. ಅನಿತಾ ರವರು, ಗ್ರಾಮಸ್ಥರು ಗ್ರಾಮದ ಯುವಕರು, ಮಕ್ಕಳು, ಹಾಗೂ ಅಂತಿಮ ವರ್ಷದ ಕೃಷಿ ಮತ್ತು ಆಹಾರ ತಂತ್ರಜ್ಞಾನ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
