ಸಕಲೇಶಪುರ : ನವೆಂಬರ್ 01 ರಂದು ಕನ್ನಡ ರಾಜ್ಯೋತ್ಸವವನ್ನು ಆಚರಿಸಿ ಕನ್ನಡ ಭಾವುಟ ಹಾರಿಸಬೇಕಾದದ್ದು ಎಲ್ಲಾ ಕನ್ನಡಿಗರ ಕರ್ತವ್ಯ ಆದರೆ ಸಕಲೇಶಪುರದ ತಾಲ್ಲೂಕು ಕೇಂದ್ರದಲ್ಲಿ ಕಾರ್ಯಕ್ರಮ ನಡೆಸಿ ಕನ್ನಡ ಭಾವುಟ ಹಾರಿಸದೇ ಇರುವುದು ನಿಜಕ್ಕೂ ವಿಷಾದನೀಯ ಸಂಗತಿ, ಹಾಗಾಗಿ ಈ ವಿಚಾರವಾಗಿ ನಗರದ ಅಂಬೇಡ್ಕರ್ ಭವನದಲ್ಲಿ ಸಕಲೇಶಪುರದ ವಿವಿಧ ಸಂಘಟನೆಗಳ ಸಭೆ ನಡೆಸಿ ಎಲ್ಲಾ ಸಂಘಟನೆಗಳ ಒಪ್ಪಿಗೆಯ ಮೇರೆಗೆ ಮುಂದಿನ ದಿನಗಳಲ್ಲಿ ಹೋರಾಟವನ್ನು ನಡೆಸಲು ನಿರ್ಧರಿಸಲಾಯಿತು.

ಸಭೆಯಲ್ಲಿ ನಾಡ ಧ್ವಜ ಹೋರಾಟ ಸಮಿತಿಯನ್ನು ರಚಿಸಲಾಯಿತು .

ಹೋರಾಟ ಸಮಿತಿಯ ಅಧ್ಯಕ್ಷರನ್ನಾಗಿ ನಾಸಿರ್ ಖಾನ್.

ಉಪಾಧ್ಯಕ್ಷರಾಗಿ. ದಿಲೀಪ್ ಸಹಕಾರ್ಯದರ್ಶಿಯಾಗಿ. ಧರಣಿ

ಕಾರ್ಯದರ್ಶಿಯಾಗಿ. ಪುಟ್ಟರಾಜ್ ಮಳಲಿ

ಕೋಶಾಧ್ಯಕ್ಷರನ್ನಾಗಿ. ಯೋಗೇಶ್

ಸಲಹಸಮಿತಿ ನಲ್ಲೂಲೀ ಈರಪ್ಪಣ್ಣ ರುದ್ರೇಶ್ ಬೈಕೆರೆ ಮಂಜುನಾಥ್, ಮಲ್ಲೇಶ್, ಯುನೋಸ್,ಲತೀಫ್, ಯೋಗ ಗುರುಗಳು ಉದಯ್,

ಹೋರಾಟ ಸಮಿತಿ ಮಹಿಳಾ ಅಧ್ಯಕ್ಷರನ್ನಾಗಿ ಶಾರದಾ ಗುರುಮೂರ್ತಿ

ಹೋರಾಟ ಸಮಿತಿಯ ಉಪಾಧ್ಯಕ್ಷರನ್ನಾಗಿ ಮೀನಾಕ್ಷಿ ಇವರುಗಳನ್ನು ಆಯ್ಕೆ ಮಾಡಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟವನ್ನು ನಡೆಸಲು ತೀರ್ಮಾನ ಮಾಡಲಾಯಿತು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *