
ರಾಜ್ಯದಲ್ಲಿ ಈಗಾಗಲೇ ವಿಧಾನಸಭೆ ಚುನಾವಣೆ ಕಣ ರಂಗೇರಿದ್ದು, ತಮ್ಮ ಅನುದಾನವನ್ನು ಕಾರ್ಯರೂಪಕ್ಕೆತರುವ ತರಾತುತರಿಯಲ್ಲಿ ಕೆಲಸ ಮಾಡಲು ಚಾಲನೆ ನೀಡಿದೆ.
ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಕೊಡುಗೆಗಳ ಸರಮಾಲೆಯೇ ಹರಿದುಬರುತ್ತಿದೆ. ಇದೀಗ ಹಲವು ರಾಷ್ಟ್ರೀಯ ಹೆದ್ದಾರಿಗಳ ಅಗಲೀಕರಣಕ್ಕೆ ಕೇಂದ್ರ ಸರ್ಕಾರ ಸಮ್ಮತಿ ಸೂಚಿಸಿ ಅನುದಾನವನ್ನು ಬಿಡುಗಡೆ ಮಾಡಿದೆ.
ಬಹಳ ದಿನಗಳಿಂದ ನೆನಗುದ್ದಿಗೆ ಬಿದ್ದಿದ್ದ ರಾಷ್ಟೀಯ
ಹೆದ್ದಾರಿ ವಿಸ್ತರಣೆಗೆ ಸುಮಾರು ಆರುನೂರ ತೊಂಬತೆಂಟು ಕೋಟಿಯಷ್ಟು ಅನುದಾನ ಬಿಡುಗಡೆಮಾಡಿದೆ.
ಹಾಗೆಯೇ ಬೇಲೂರು- ಹಾಸನ ನಡುವಿನ ಹೆದ್ದಾರಿ ವಿಸ್ತರಣೆಗೂ ಅನುದಾನದವನ್ನು ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮಾಹಿತಿ ನೀಡಿದ್ದಾರೆ.
