ಚುಣಾವಣಾ ಆಯೋಗದ ಗ್ರೀನ ಸಿಗ್ನಲ್ ಪಡೆದ
ಜನಾರ್ದನ ರೆಡ್ಡಿ. ರಾಜಕೀಯ ಆಟದಲ್ಲಿ ಫುಟ್ಟ್ ಬಾಲ್ಆಡಲು ತೊಡೆತಟ್ಟಿ ನಿಂತ ಆಗರ್ಭ ಶ್ರೀಮಂತ.

ಮಾಜಿ ಸಚಿವ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಜನಾರ್ದನ ರೆಡ್ಡಿ ಚುನಾವಣಾ ಆಯೋಗದಿಂದ ಚಿಹ್ನೆ ಪಡೆದಿದ್ದಾರೆ.

ಡಿಸೆಂಬರ್‌ 25, 2022ರಲ್ಲಿ ಹೊಸ ಪಕ್ಷ ಘೋಷಣೆ ಮಾಡಿರುವ ಅವರು, ಕೊಪ್ಪಳ ಜಿಲ್ಲೆಯ ಗಂಗಾವತಿಯಿಂದ ಕಣಕ್ಕಿಳಿಯಲಿದ್ದಾರೆ. ಹಲವು ಕ್ಷೇತ್ರಗಳಿಗೆ ಸಹ ಅವರು ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದಾರೆ.

ಜನಾರ್ದನ ರೆಡ್ಡಿ ಸ್ಥಾಪನೆ ಮಾಡಿರುವ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿಗಳು ಫುಟ್‌ಬಾಲ್ ಚಿಹ್ನೆಯಡಿ ಈ ಬಾರಿಯ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಚುನಾವಣಾ ಆಯೋಗವು ಪಕ್ಷಕ್ಕೆ ಚಿಹ್ನೆಯನ್ನು ಸೋಮವಾರ ಹಂಚಿಕೆ ಮಾಡಿದೆ. ಜನಾರ್ದನ ರೆಡ್ಡಿ ಈಗಾಗಲೇ ಅಭ್ಯರ್ಥಿ ಘೋಷಣೆ ಮಾಡುವ ಜೊತೆಗೆ ಪ್ರಣಾಳಿಕೆಯನ್ನು ಸಹ ಬಿಡುಗಡೆ ಮಾಡಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *