
*ಸಿರಿಧಾನ್ಯಗಳ ಮಹತ್ವ* ಹಾಸನದ ಕಾರೇಕೆರೆಯ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ಬಿ. ಎಸ್. ಸಿ (ಆನರ್ಸ್)ಕೃಷಿ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ 2023-24 ರ ಅಂಗವಾಗಿ ಅರಸೀಕೆರೆ ತಾಲ್ಲೂಕು ಗಂಡಸಿ ಹೋಬಳಿಯ ಕುಡುಕುಂದಿ ಗ್ರಾಮದಲ್ಲಿ *ಸಿರಿಧಾನ್ಯಗಳ ಮಹತ್ವ* ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಪ್ರಮುಖ ಸಿರಿಧಾನ್ಯಗಳಾದ ರಾಗಿ, ಸಜ್ಜೆ,ನವಣೆ,ಹಾರಕ,ಬರಗು,ನವಣೆ, ಸಾಮೆ,ಕೊರಲೆ, ಊದಲು ಇವುಗಳ ಬೇಸಾಯ ಕ್ರಮಗಳು, ತಳಿಗಳು,ಉಪಯೋಗಳ ಬಗ್ಗೆ ಮಾಹಿತಿ ನೀಡಿದರು.
ಸಿರಿಧಾನ್ಯಗಳು ಹೆಚ್ಚು ಪೋಷಕಾಂಶ ಹೊಂದಿದ್ದು,ಹಳ್ಳಿಗಳಲ್ಲಿ ಅಪೌಷ್ಠಿಕತೆಯನ್ನು ಕಡಿಮೆ ಮಾಡಿ ಆರೋಗ್ಯವನ್ನು ಉತ್ತಮಗೊಳಿಸಲು ಸಹಾಯ ಮಾಡುತ್ತದೆ. ಬರಪೀಡಿತ ಪ್ರದೇಶದಲ್ಲು ಬೆಳೆಯಬಹುದಾಗಿದೆ.
ಸಿರಿಧಾನ್ಯ ಗಳಿಂದ ಮೌಲ್ಯವರ್ಧಿತ ವಸ್ತುಗಳಾದ ಬಿಸ್ಕೇಟ್, ಬರ್ಫಿ, ಲಾಡು,ಚಕ್ಕುಲಿ ಮುಂತಾದವುಗಳನ್ನು ತಯಾರಿಸಬಹುದು.ಒಂದು ವೇಳೆ ನೀರಿನ ಆಭಾವವಾದಗ ಧಾನ್ಯದ ಇಳುವರಿ ಕಡಿಮೆಯಾದರೂ ಹುಲ್ಲನು ಮೇವಾಗಿ ಬಳಸಬಹುದು.
ಗ್ರಾಮದ ಮುಖ್ಯಸ್ಥರಾದ ಟಿ.ದೇವರಾಜು, ಎಂ.ದೇವರಾಜು,ಬೋರೇಗೌಡ,ಸುರೇಶ್,ದಿನೇಶ್,ಕವನ, ಮಮತ ಮುಂತಾದವರು ಪಾಲ್ಗೊಂಡಿದ್ದರು.
