
ಹಾಸನ: ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಅಡಿಯಲ್ಲಿ ಬರುವ ಕೃಷಿ ಮಹಾವಿದ್ಯಾಲಯ, ಕಾರೇಕೆರೆ, ಹಾಸನದ ವತಿಯಿಂದ ಆಯೋಜಿಸಲಾದ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ 2023-24ರ ಅಂಗವಾಗಿ ಅಂತಿಮ ವರ್ಷದ ಕೃಷಿ ವಿದ್ಯಾರ್ಥಿಗಳಿಂದ ದೊಡ್ದಯರಗನಾಳು ಗ್ರಾಮದಲ್ಲಿ ‘ಕೀಟದ ಬಲೆಗಳ ಅರಿವು’ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಕೀಟಶಾಸ್ತ್ರ ತಜ್ಞರಾದ ಡಾ.ಬಿ.ಎಸ್.ಬಸವರಾಜು ರವರು ಆಗಮಿಸಿದ್ದರು. ಕೀಟದ ಬಲೆಗಳ ವಿಧಗಳು ಹಾಗೂ ಅವುಗಳ ಪ್ರಾಮುಖ್ಯತೆಯ ಬಗ್ಗೆ ವಿದ್ಯಾರ್ಥಿನಿಯಾದ ಕೀರ್ತಿರವರು ತಿಳಿಸಿದರು.
ಕೀಟಗಳ ನಿರ್ವಹಣೆಗೆ ನೇರವಾಗಿ ರಾಸಾಯನಿಕಗಳ ಅಧಿಕ ಬಳಕೆ ಮಾಡುವುದರ ಬದಲಾಗಿ ಕೀಟದ ಬಲೆಗಳ ಬಳಕೆ ಉತ್ತಮವೆಂದು ತಿಳಿಸಿದರು ಹಾಗೂ ಇವುಗಳು ಪರಿಸರ ಸ್ನೇಹಿ ಕೀಟ ನಿರ್ವಹಣಾ ಕ್ರಮವಾಗಿದೆ ಎಂದು ತಿಳಿಸಿದರು.
ವಿವಿಧ ಕೀಟದ ಬಲೆಗಳನ್ನು ರೈತರಿಗೆ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಯಿತು.ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾದ ಡಾ. ಬಿ. ಎಸ್ .ಬಸವರಾಜು ರವರು ಕೀಟದ ಬಲೆಗಳ ಬಳಕೆಯು ವೆಚ್ಚ ಪರಿಣಾಮಕಾರಿಯಾಗಿದೆ ಹಾಗೂ ರಾಸಾಯನಿಕಗಳ ಬಳಕೆ ಕಡಿಮೆ ಮಾಡುವಲ್ಲಿ ಸಹಾಯಕವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅನೇಕ ಸಂಖ್ಯೆಯಲ್ಲಿ ಗ್ರಾಮದ ರೈತರು ಹಾಜರಿದ್ದು ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.
