” *ಆಹಾರ ಫ್ಯಾಡಿಸಂ* “ಅರಸೀಕೆರೆ ತಾಲೂಕು ,ಗಂಡಸಿ ಹೋಬಳಿ ,ಹಿರಿಸಮುದ್ರ ಗ್ರಾಮದಲ್ಲಿಕೃಷಿ ವಿಶ್ವವಿದ್ಯಾಲಯ ಬೆಂಗಳೂರು, ಕೃಷಿ ಮಹಾವಿದ್ಯಾಲಯ ,ಕಾರೆಕೆರೆ, ಹಾಸನದ ವತಿಯಿಂದ ಆಯೋಜಿಸಲಾಗಿದ್ದ ಗ್ರಾಮೀಣ ಕೃಷಿ ಕಾರ್ಯಾಣುಭವ ಶಿಬಿರ 2023 – 24ರ ಅಂಗವಾಗಿ ಅಂತಿಮ ವರ್ಷದ ಆಹಾರ ತಂತ್ರಜ್ಞಾನ ಹಾಗೂ ಕೃಷಿ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಆಹಾರ ಫ್ಯಾಡಿಸಂ ಎಂಬ ಕಾರ್ಯಕ್ರಮ ತುಂಬಾ ಪರಿಣಾಮಕಾರಿಯಾಗಿ ಮೂಡಿ ಬಂತು.

ಕಾರ್ಯಕ್ರಮಕ್ಕೆ ಸರಿಸುಮಾರು 40 ಜನರು ಸೇರಿದ್ದರು. ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಡಾ. ಗೋಪಿಕಾ .ಸಿ .ಮುತ್ತಗಿ ಸಹಾಯಕ ಪ್ರಾಧ್ಯಾಪಕರು, ಆಹಾರ ಸಂಸ್ಕರನಾ ತಂತ್ರಜ್ಞಾನ ವಿಭಾಗ ಇವರು ಆಗಮಿಸಿದ್ದರು. “ಆಹಾರ ಫ್ಯಾಡಿಸಂ” ಎಂಬುವುದು ನಮ್ಮ ಪ್ರತಿದಿನದ ಆಹಾರ ಪದ್ಧತಿಯಲ್ಲಿ ಉತ್ಪ್ರೇಕ್ಷಿತಗೊಂಡ ಕೆಲವೊಂದು ಆಹಾರ ಅಥವಾ ಆಹಾರದ ಗುಂಪು. ಜನರಲ್ಲಿದ್ದ ಆಹಾರ ಸಂಬಂಧಿತ ತಪ್ಪು ಕಲ್ಪನೆಗಳನ್ನು ಪರಿಹರಿಸಿದರು.

ಇದರಲ್ಲಿ ಪ್ರಮುಖವಾಗಿ “ಸಸ್ಯಾಹಾರಿ ಆಹಾರದಿಂದ ಸಾಕಷ್ಟು ಪ್ರೋಟೀನ್ ಪಡೆಯಲು ಸಾಧ್ಯವಿಲ್ಲ ,ಎಲ್ಲಾ ಮೌಲ್ಯವರ್ದಿತ ಆಹಾರಗಳನ್ನು ತ್ಯಜಿಸಬೇಕು, ಕಂದು ಬಣ್ಣದ ಮೊಟ್ಟೆಗಳು ಬಿಳಿ ಮೊಟ್ಟೆಗಳಿಗಿಂತ ಆರೋಗ್ಯವಾಗಿವೆ, ಎಲ್ಲಾ ತರದ ಕೊಬ್ಬು ದೇಹಕ್ಕೆ ಕೆಟ್ಟದ್ದು” ಎಂಬ ತಪ್ಪು ಕಲ್ಪನೆಗಳ ಹಾಗೂ ಬೋರ್ವೆಲ್ ನೀರು ಕುಡಿಯುವುದರಿಂದ ಆರೋಗ್ಯದ ಮೇಲೆ ಆಗುವ ಪರಿಣಾಮಗಳ ಬಗ್ಗೆ ಜನರಿಗೆ ವಿವರಿಸಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *