ಚಗಚಗೆರೆ ಗ್ರಾಮದಲ್ಲಿ ಕೃಷಿ ಕಾರ್ಯಾನುಭವ ಶಿಬಿರದ ಅಂಗವಾಗಿ ಅಂತಿಮ ವರ್ಷದ ಆಹಾರ ತಂತ್ರಜ್ಞಾನ ವಿದ್ಯಾರ್ಥಿಗಳಿಂದ ಗ್ರಾಮದ ಹೃದಯ ಭಾಗದಲ್ಲಿರುವ ಸಮುದಾಯ ಭವನದಲ್ಲಿ ‘ತೆಂಗು ಮತ್ತು ರಾಗಿಯಲ್ಲಿ ಮೌಲ್ಯವರ್ಧನೆ’ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ತೆಂಗು ಮತ್ತು ರಾಗಿ ಬೆಳೆಗಾರ ರೈತರಿಗೆ ಅದರ ಮೌಲ್ಯವರ್ಧನೆ ಬಗ್ಗೆ ಮಾಹಿತಿ ನೀಡಲಾಯಿತು ಮತ್ತು ಅದರ ಮೌಲ್ಯವರ್ಧನೆ ಮಾಡುವುದು ಹೇಗೆ ಮತ್ತು ಅದರಿಂದಾಗುವ ಲಾಭ ಏನು ಮೌಲ್ಯವರ್ಧಿತ ಪದಾರ್ಥವನ್ನು ಮಾರಾಟ ಮಾಡುವುದು ಹೇಗೆ? ಹಾಗೂ ಅನೇಕ ಮೌಲ್ಯವರ್ಧನೆಗೆ ಸಂಬಂಧಪಟ್ಟಂತ ಪ್ರಶ್ನೆಗಳಿಗೆ ವಿಸ್ತಾರವಾಗಿ ಸ್ಪಷ್ಟ ಉತ್ತರವನ್ನು ಕಾರ್ಯಕ್ರಮದಲ್ಲಿ ನೀಡಲಾಯಿತು

ಮತ್ತು ಮೌಲ್ಯವರ್ಧನೆಯನ್ನು ಪ್ರೋತ್ಸಾಹಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದಿರುವ ವಿವಿಧ ಯೋಜನೆಗಳ ಬಗ್ಗೆ ವಿಸ್ತಾರವಾಗಿ ವಿವರಿಸಲಾಯಿತು. ಮುಂದುವರೆದು ಕೃಷಿ ಕಾಲೇಜಿನ ಪ್ರಾಧ್ಯಾಪಕರು ಹಾಗೂ ಸಂಪನ್ಮೂಲ ವ್ಯಕ್ತಿಗಳಾದ ಡಾ.ಗೋಪಿಕಾ ರವರು ಕಾರ್ಯಕ್ರಮವನ್ನು ಕುರಿತು ಮಾತನಾಡಿ ಜನರಿಗೆ ಮೌಲ್ಯವರ್ಧನೆ ಬಗ್ಗೆ ಇರುವ ಗೊಂದಲಗಳನ್ನು ಪರಿಹರಿಸಿದರು.

ಕಾರ್ಯಕ್ರಮವನ್ನು ಅಂತಿಮ ವರ್ಷದ ಆಹಾರ ತಂತ್ರಜ್ಞಾನ ವಿದ್ಯಾರ್ಥಿಯಾದ ಚಂದನಗೌಡ ಅವರು ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಚಗಚಗೆರೆ ಗ್ರಾಮದ ಹಿರಿಯರು, ಯುವಕರು, ಕೃಷಿ ಕಾಲೇಜಿನ ಆಹಾರ ತಂತ್ರಜ್ಞಾನ ವಿಭಾಗದ ಪ್ರಾಧ್ಯಾಪಕರಾದ dr. ಗೋಪಿಕಾ ಮೇಡಂ ಹಾಗೂ ಅಂತಿಮ ವರ್ಷದ ಕೃಷಿ ಹಾಗೂ ಆಹಾರ ತಂತ್ರಜ್ಞಾನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *