
ಬೇಲೂರು : ಪ್ರಕೃತಿಯೊಂದಿಗೆ ಬದುಕುವ ಕಾಫಿ ಬೆಳೆಗಾರರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಲಹೆ ಬೇಲೂರು ತಾಲೂಕು ಬಿಕ್ಕೋಡು ಹೋಬಳಿಯ ಭೂಮಿಪುತ್ರ ಬೆಳೆಗಾರರ ಸಂಘದ 13 ನೇ ವಾರ್ಷಿಕೋತ್ಸವದ ಅತ್ಯಂತ ವಿಜೃಂಭಣೆಯಿಂದ ನಡೆಯಿತು
ಈ ಸಂದರ್ಭದಲ್ಲಿ ಹಾಸನದ ಎಸ್ ಡಿ ಎಂ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಆಯುರ್ವೇದ ಮತ್ತು ಯೋಗ ತಜ್ಞ ಡಾ. ಗುರು ಬಸವರಾಜ್ ಯಲಗಚ್ಚಿನ MD PHD ಮಾತನಾಡಿ ಉತ್ತಮ ಆಹಾರ ನಿದ್ರೆ ಸಮಯ ಪ್ರಜ್ಞೆ ಮೈಗೂಡಿಸಿಕೊಂಡು ಮತ್ತು ಮಕ್ಕಳಿಗೆ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ನೀಡಬೇಕು ಎಂದರು ಆರೋಗ್ಯದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು
ತಾಲೂಕಿನ ತಹಶೀಲ್ದಾರ್ ಎಂ ಮಮತ ಮಾತನಾಡಿ ಕಂದಾಯ ಇಲಾಖೆಯ ಬಗ್ಗೆ ಹಾಗೂ ಕಾಡಾನೆಗಳ ಸ್ಥಳಾಂತರ ಮಾಡುವ ಬಗ್ಗೆ ಸರ್ಕಾರದ ವರದಿ ಸಲ್ಲಿಸುತ್ತೇನೆ ಎಂದರು
ಭೂಮಿಪುತ್ರ ಬೆಳೆಗಾರರ ಸಂಘದ ಮಹಿಳಾ ಬೆಳೆಗಾರರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು
ನಿವೃತ್ತ ಸೈನಿಕರಾದ ಶ್ರೀ ಸಿರಿಲ್ ಕ್ರಾಸ್ತ ರವರನ್ನು ಗೌರವಿಸಲಾಯಿತು
ಭೂಮಿಪುತ್ರ ಬೆಳೆಗಾರರ ಸಂಘದ ಅಧ್ಯಕ್ಷರಾದ ಶ್ರೀ ಕೆ ಟಿ ರೇಣುಕಾನಂದ ಅಧ್ಯಕ್ಷತೆ ವಹಿಸಿದ್ದರುತಾಲೂಕು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಅದ್ದೂರಿ ಎಂ ಕುಮಾರ್ ಮಹಿಳಾ ಬೆಳೆಗಾರರ ಸಂಘದ ಅಧ್ಯಕ್ಷೆ ಶ್ರೀಮತಿ ಯಶೋದ ಉಪಾಧ್ಯಕ್ಷರುಗಳಾದ ಶಿವಾನಂದ್,ನಪೀಸ್ ಅಹಮದ್, ಸಿರಿಲ್ ಕ್ರಾಸ್ತ ಪ್ರಧಾನ ಕಾರ್ಯದರ್ಶಿ ವ್ಯೆಶಾಕ್ ಖಜಾಂಚಿ ನಿರಂಜನ್, ಶರತ್ ಸೇರಿದಂತೆ ಹಿರಿಯ ಬೆಳೆಗಾರರು ಹಾಗೂ ಮಹಿಳೆಯರ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು
ಮಹಿಳೆಯರಿಗೆ ಕ್ರೀಡಾಕೂಟದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು
ಮಹಿಳೆಯರ ಕೋಲಾಟ ಹಾಡು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಅತಿಥಿಗಳ ಮತ್ತು ಬೆಳೆಗಾರರ ಮೆಚ್ಚುಗೆಗೆ ಪಾತ್ರವಾಯಿತು



