ಸಕಲೇಶಪುರ : *ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವತಿಯಿಂದ ಹಿಂದೂ ಮನೆಗೆ ಮಂತ್ರಾಕ್ಷತೆ ಕಾರ್ಯಕ್ರಮ* ಅಯೋಧ್ಯೆಯಿಂದ ಬಂದಿರುವ ಪವಿತ್ರ ಮಂತ್ರಕ್ಷತೆ ವಿತರಣೆ ಕಾರ್ಯಕ್ರಮ ಹೆಬ್ಬಾಸಲೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೆನ್ನಲಿ ಗ್ರಾಮ ಹಾಗೂ ಹೆಬ್ಬಸಾಲೆ ಗ್ರಾಮದಲ್ಲಿ ಪ್ರತಿ ಹಿಂದೂ ಮನೆಗೆ ತಲುಪಿಸಲಾಯಿತು.

ದಿನಾಂಕ 22.01.24 ರಂದು ಅಯೋಧ್ಯೆಯಲ್ಲಿ ಭವ್ಯ ರಾಮಜನ್ಮಭೂಮಿಯಲ್ಲಿ ರಾಮಲಾಲ ಮೂರ್ತಿ ಪ್ರಾಣಪ್ರತಿಷ್ಠಾಪನೆ ಅಗಲಿದ್ದು. ಅಂದು 12.30 ಕ್ಕೆ ತೀರ್ಥ ಕ್ಷೆತ್ರ ಟ್ರಸ್ಟ್ ವತಿಯಿಂದ ನೀಡೀರುವ ಮಂತ್ರಕ್ಷತೆ ಉತ್ತರ ದಿಕ್ಕಿಗೆ ಮುಖ ಮಾಡಿ ತಲೆ ಮೇಲೆ ಹಾಕಿಕೊಂಡು ಮನೆಯಲ್ಲಿ ವಿಶೇಷ ಪೂಜೆ ಮಾಡಬೇಕು ಮತ್ತು ಸಂಜೆ ಮನೆ ಬಾಗಿಲಲ್ಲಿ 05 ದೀಪ ಹಚ್ಚಿ ದೀಪಾವಳಿ ಆಚರಣೆ ಮಾಡಬೇಕು ಎಂದು ತಿಳಿಸಿದರು.

ವಿಶ್ವ ಹಿಂದು ಪರಿಷತ್ ನ ರಾಜ್ಯ ಕಾರ್ಯಕಾರಣಿ ಸದಸ್ಯರಾದ ರಘು ಸಕಲೇಶಪುರ ಶೇಖರ್ ಕಬ್ಬಿನ ಗದ್ದೆ, ಹೆನ್ನಲಿ ಗ್ರಾಮ ಪಂಚಾಯತ್ ಸದಸ್ಯರಾದ ಪೂರ್ಣೆಶ್ ,ಸೀಮಾ ಸುರೇಶ್, ಲೇಪಾಕ್ಷಿ ದಿಲೀಪ್, ಕೌಶಿಕ್ , ಅಕ್ಷಯ ರವಿ ಶ್ರೀಜಿತ್ ಹೆಬ್ಬಾಸಲೆ ರವಿ ಹೆಬ್ಬಾಸಲೆ ದುಷ್ಯಂತ. ವಿಜಿತ್ ಇನ್ನೂ ಅನೇಕ ಹಿಂದು ಸಂಘಟನೆ ಮತ್ತು ಬಿಜೆಪಿ ಕಾರ್ಯಕರ್ತರು ಮತ್ತು ಗ್ರಾಮಸ್ಥರು ಉಪಸ್ಥಿತಿ ಇದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *