
ಸಕಲೇಶಪುರ : ಶ್ರೀ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವತಿಯಿಂದ ಸಕಲೇಶಪುರದ ಕಬ್ಬಿನಗದ್ದೆ ಗ್ರಾಮದ ಶ್ರೀ ಗಂಗಪರಮೇಶ್ವರಿ ದೇವಸ್ಥಾನದಲ್ಲಿ ಅಯೋಧ್ಯೆ ರಾಮಮಂದಿರ ಮಂತ್ರಾಕ್ಷತೆ ಪೂಜೆ ಮತ್ತು ಪ್ಯಾಕಿಂಗ್ ನಡೆಸಲಾಯಿತು.
ಪೂಜೆ ನಂತರ ಕಾರ್ಯಕರ್ತರು ಬೈಠಕ್ ನಡೆಸಿ, ಗ್ರಾಮದ ಪ್ರತಿ ಮನೆ ಮನೆಗೆ ಮಂತ್ರಾಕ್ಷತೆ ವಿತರಣೆ ಬಗ್ಗೆ ಮತ್ತು ಇದೇ 22 ನೇ ತಾರೀಕಿನಂದು ಅಯೋಧ್ಯೆ ಯಲ್ಲಿ ರಾಮಲಲ್ಲ ಪ್ರಾಣಪ್ರತಿಷ್ಠಾಪನೆ ದಿನ ಗ್ರಾಮದ ದೇವಸ್ಥಾನಗಳಲ್ಲಿ ನಡೆಯಬೇಕಿರುವ ಪೂಜಾ ಕೈಂಕರ್ಯಗಳ ಬಗ್ಗೆ ಚರ್ಚಿಸಲಾಯಿತು.
ನಂತರ ಮಾತೆಯರು ಮಂತ್ರಾಕ್ಷತೆ ಪ್ಯಾಕ್ ಮಾಡಿದರು. ನಂತರ ಪ್ರಸಾದ ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ಗ್ರಾಮದ ಮಾತೆಯರು, ಮಕ್ಕಳು, ಪ್ರಮುಖರಾದ ಮಂಜು ಕಬ್ಬಿನಗದ್ದೆ, ಸಂತೋಷ ಕಬ್ಬಿನಗದ್ದೆ, ವೀರೇಶ್ ಕೆಂಪೇಹನಲ್, ಕೃಷ್ಣಮೂರ್ತಿ ಕಬ್ಬಿನಗದ್ದೆ, ವೆಂಕಟೇಶ್, ನಿತೇಶ್ , ಲೋಹಿತ್ ಕೆಂಪೇಹನಲ್, ಹೇಮಂತ, ಮಹೇಶ್, ಯೋಗೇಶ್ , ಗ್ರಾಮದ ಹಿರಿಯರಾದ ಜಗದೀಶ್, ಕೆಂಚಪ್ಪ, ಜಯಣ್ಣ, ಚಂದ್ರಶೇಖರ, ಪ್ರಶಾಂತ್,ಲಕ್ಷ್ಮಮ್ಮ,ಭವಾನಿ, ಕವಿತ ಸೇರಿದಂತೆ 60ಕ್ಕೂ ಹೆಚ್ಚು ಮಂದಿ ಪಾಲ್ಗೊಂಡು, ಪೂಜಾ ಕಾರ್ಯಕ್ರಮವನ್ನು ಯಶಸ್ವೀಗೊಳಿಸಲಾಯಿತು .




