ಹಾಸನ: ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಅಡಿಯಲ್ಲಿ ಬರುವ ಕೃಷಿ ಮಹಾವಿದ್ಯಾಲಯ, ಕಾರೇಕೆರೆ, ಹಾಸನದ ವತಿಯಿಂದ ಆಯೋಜಿಸಲಾದ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ 2023-24ರ ಅಂಗವಾಗಿ ಅಂತಿಮ ವರ್ಷದ ಆಹಾರ ತಂತ್ರಜ್ಞಾನ ವಿದ್ಯಾರ್ಥಿಗಳಿಂದ ದೊಡ್ದಯರಗನಾಳು ಗ್ರಾಮದಲ್ಲಿ ‘ಸಿರಿಧಾನ್ಯಗಳ ಮಹತ್ವ ಮತ್ತು ಮೌಲ್ಯವರ್ಧಿತ ಉತ್ಪನ್ನಗಳುʼ ಕುರಿತಾದ ಅರಿವು ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಡಾ.ಬನು ದೇಶಪಾಂಡೆ ರವರು ಆಗಮಿಸಿದ್ದರು.

ಸಿರಿಧಾನ್ಯಗಳಾದ-ರಾಗಿ, ಬರಗು,ಸಜ್ಜೆ,ಜೋಳ, ನವಣೆ,ಹಾರಕ, ಸಾಮೆ,ಊದಲ ಕೊರಲೆ ಹಾಗೂ ಇವುಗಳ ಮಹತ್ವ -ಪೋಷಕಾಂಶಗಳ ಕಣಜ.ಕಬ್ಬಿಣಾಂಶ, ಮೆಗ್ನೀಶಿಯಂ, ತಾಮ್ರ, ರಂಜಕ, ಸತು, ಕ್ಯಾಲ್ಷಿಯಂ ಹಾಗೂ ಪೊಟ್ಯಾಷಿಯಂ ಅಂಶಗಳು ಹೇರಳವಾಗಿದೆ. ಪ್ರೋಟೀನ್, ನಾರಿನಾಂಶ, ಬಿ ಗುಂಪಿನ ಜೀವಸತ್ವಗಳ ಕಣಜವಾಗಿದೆ.

ಸಿರಿಧಾನ್ಯಗಳ ಆರೋಗ್ಯ ಪ್ರಯೋಜನಗಳು, ಸಿರಿಧಾನ್ಯಗಳ ಬಳಕೆ ವಿಧಾನ ಹಾಗೂ ಸಿರಿಧಾನ್ಯಗಳ ಮೌಲ್ಯವರ್ಧಿತ ಉತ್ಪನ್ನಗಳಾದ – ನವಣೆ ಚಕ್ಲಿ, ಸಿರಿಧಾನ್ಯ ಬಿಸ್ಕೆಟ್ ತಯಾರಿಕೆ ಬಗ್ಗೆ ವಿದ್ಯಾರ್ಥಿನಿಯಾದ ರಜನಿ.ಎನ್ ಅವರು ತಿಳಿಸಿದರು.

ನಂತರ ಸಂಪನ್ಮೂಲ ವ್ಯಕ್ತಿಗಳು ನೇರವಾಗಿ ಜನರೊಂದಿಗೆ ಚರ್ಚೆಯನ್ನು ನಡೆಸಿ ಸಿರಿಧಾನ್ಯಗಳ ವಿವಿಧ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆ ಹಾಗೂ ಅದರ ಮಹತ್ವವನ್ನು ತಿಳಿಸಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *