
ಹಾಸನ : ಗ್ರಾಮೀಣ ಕೃಷಿ ಕಾರ್ಯನುಭವ ಶಿಬಿರದ ಅಂಗವಾಗಿ ಚಗಚಗೆರೆ ಗ್ರಾಮದಲ್ಲಿ ಶುಕ್ರವಾರದಂದು ಕೃಷಿ ಮಹಾವಿದ್ಯಾಲಯ ಕಾರೇಕೆರೆ, ಹಾಸನ ಅಂತಿಮ ವರ್ಷದ ಕೃಷಿ ವಿಧ್ಯಾರ್ಥಿಗಳು ಮತ್ತು ಆಹಾರ ತಂತ್ರಜ್ಙಾನ ವಿಧ್ಯಾರ್ಥಿಗಳು ಬೀಜವನ್ನು ಬಿತ್ತುವ ಮೊದಲು ಬೀಜಗಳಿಗೆ ಬೀಜೋಪಚಾರ ಮಾಡುವುದು ಅತಿ ಮುಖ್ಯ ಎಂಬುವುದರ ಬಗ್ಗೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಈ ಕಾರ್ಯಕ್ರಮದಲ್ಲಿ ರೈತರಿಗೆ ಏಕದಳ ಧಾನ್ಯಗಳಿಗೆ (ರಾಗಿ, ಮೆಕ್ಕೆಜೋಳ) ಬಳಸಬಹುದಾದ ಜೈವಿಕಗೊಬ್ಬರವಾದ ಅಜೋಸ್ಪೈರುಲಂ, ಅಜಟೋಬ್ಯಾಕ್ಟರ್, ಹಾಗೂ ದ್ವಿದಳ ಧಾನ್ಯಗಳಿಗೆ ಬಳಸಬಹುದಾದಂತಹ ಟ್ರೈಕೋಡರ್ಮಾ ಇತ್ಯಾದಿ. ಇವುಗಳನ್ನು ಬಳಸುವುದರಿಂದ ಬೀಜಗಳಿಗೆ ಬರುವ ರೋಗ ಮತ್ತು ಕೀಟಗಳನ್ನು ಹತೋಟಿ ಮಾಡಬಹುದು ಹಾಗೂ ಹೆಚ್ಚು ಇಳುವರಿಯನ್ನು ತೆಗೆಯಬಹುದು ಎಂದು ತಿಳಿಸಿದರು.
ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಕೃಷಿ ಮಹಾವಿದ್ಯಾಲಯ ಡಾ. ತೋಟ ಜೋಸೆಫ್ ಬೀಜ ವಿಜ್ಙಾನ ಮತ್ತು ತಂತ್ರಜ್ಙಾನ ವಿಭಾಗ ಉಪಸ್ಥಿತರಿದ್ದರು. ಹಾಗೂ ಗ್ರಾಮದ ಎಲ್ಲಾ ರೈತಬಾಂಧವರು ಸಹ ಉಪಸ್ಥಿತರಿದ್ದರು.
