
ಸಕಲೇಶಪುರ: ಹೃದಯ, ಮೆದುಳು ಹಾಗೂ ಮೆದುಮೇಹ ರೋಗಗಳ ಹತೋಟಿಗೆ ಕಾಫಿ ಕುಡಿಯುವುದು ಅತ್ಯಂತ ಉಪಯುಕ್ತ ಎಂದು ಬೆಂಗಳೂರಿನ ಜಯದೇವ್ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್ ಮಂಜುನಾಥ್ ಹೇಳಿದರು.
ಶನಿವಾರ ಪಟ್ಟಣದ ಸುಭಾಷ್ ಮೈದಾನದಲ್ಲಿ ಹಾಸನ ಬೆಳೆಗಾರರ ಸಂಘ ಹಮ್ಮಿಕೊಂಡಿದ್ದ ಕಾಫಿ ವಿತ್ ಡಾಕ್ಟರ್ ಎಂಬ ಕಾಫಿ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಹಲವು ಅಂತರಾಷ್ಟಿಯ ಸಂಶೋದನೆಗಳು ಕಾಫಿ ಆರೋಗ್ಯಕ್ಕೆ ಪೂರಕ ಎಂಬುದನ್ನು ಸಾಭೀತಪಡಿಸಿವೆ.
ನಿಯಮಿತವಾಗಿ ಕಾಫಿಸೇವಿಸುವುದರಿಂದ ಮೆದಳು ಚುರುಕುಗೊಳ್ಳಲಿದೆ,ನನಪಿನ ಶಕ್ತಿ ವೃದ್ದಿಯಾಗಲಿದೆ ಅಲ್ಲದೆ ಮೆದುಮೇಹ ರೋಗ ಹತೋಟಿಗೆ ನಿಯಮಿತ ಕಾಫಿ ಸೇವನೆ ಅತ್ಯಂತ ಅಗತ್ಯವಾಗಿದೆ.
ಆದರೆ, ಕಾಫಿ ಸೇವೆನೆಯಿಂದ ದೊರಕುವ ಅನುಕೂಲವನ್ನು ಇತರೆ ದುಶ್ಚಟಗಳು ಹಾಳುಮಾಡುತ್ತಿವೆ.ಯಾವುದೆ ದುಶ್ಚಟಗಳಿಲ್ಲದೆ ನಿತ್ಯ ಎರಡರಿಂದ ಮೂರು ಕಫ್ ಕಾಪಿ ಕುಡಿದರೆ 10 ವರ್ಷ ಆರೋಗ್ಯ ವೃದ್ದಿಸಲಿದೆ ಎಂಬುದು ಸಂಶೋದನೆಯ ಮೂಲಕ ತಿಳಿದು ಬಂದಿದೆ.
ಕಾಫಿಯಲ್ಲಿ ಶ್ರೇಷ್ಠತೆ ಕಾಪಾಡಲು ಚಿಕೋರಿ ಹೊರತುಪಡಿಸಿದ ಕಾಫಿ ಮಾರುಕಟ್ಟೆಗೆ ಬರುವ ಅಗತ್ಯವಿದೆ ಈ ನಿಟ್ಟಿನಲ್ಲಿ ಮಾರುಕಟ್ಟೆ ವಿಭಾಗದವರು ಗಮನಹರಿಸ ಬೇಕು. ಭಾರತೀಯರಿಗೆ ತೊಂದರೆ ನೀಡುವ ಉದ್ದೇಶದಿಂದಲೇ ಭ್ರೀಟಿಷರು ಕಾಫಿಗೆ ಚಿಕೋರಿ ಬೆರಸುವ ಸಮಸ್ಯೆ ಸೃಷ್ಟಿಸಿದ್ದಾರೆ. ಇದರಿಂದಲೇ ಕಾಫಿ ರುಚಿ ಹಾಳಾಗುತ್ತಿದೆ. ಕಾಫಿಯನ್ನು ಚೀಕೋರಿ ಅಂಶ ಕೊಲ್ಲುತ್ತಿದೆ. ಕಾಫಿಗೆ ಹೆಚ್ಚಿನ ಮಾರುಕಟ್ಟೆ ಸೃಷ್ಟಿಸುವ ನಿಟ್ಟಿನಲ್ಲಿ ಬೆಳೆಗಾರರ ಸಂಘಟನೆ ಹಾಗೂ ಕಾಫಿಮಂಡಳಿ ನಿರಂತರ ಕಾರ್ಯಕ್ರಮ ಹಮ್ಮಿಕೊಳ್ಳ ಬೇಕು.
ನಮ್ಮ ದಿನಚರಿ ಕಾಫಿಯಿಂದ ಆರಂಭಿಸಿದರೆ ಸಾಕಷ್ಟು ಆರೋಗ್ಯಲಭಿಸಲಿದೆ. ಬದಲಾದ ಜೀವನ ಶೈಲಿಯಿಂದ ಶೇ 65 ರಷ್ಟು ಸಾವುಗಳು ಸಂಭವಿಸುತ್ತಿವೆ ಎಂದರು. ಹೃದಯ ಸಂಭAದ ಖಾಯಿಲೆಗಳನ್ನು ಹತೋಟಿಯಲ್ಲಿ ಇಡಬೇಕಾದರೆ ರಕ್ತದ ಒತ್ತಡ ಹಾಗೂ ಕೊಬ್ಬಿನ ಅಂಶವನ್ನು ಹತೋಟಿಯಲ್ಲಿ ಇಡುವ ಅಗತ್ಯವಿದೆ ಎಂದರು.
ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ ಸಂದೇಶ್ ಮಾತನಾಡಿ, ಕಾಫಿ ಬೆಳೆಗಾರರ ಬಧುಕು ಇತರರಿಗೆ ಮಾದರಿಯಾಗಿದೆ. ರಾಜ್ಯದಲ್ಲಿ ಕಾಫಿಬೆಳೆಗಾರರ ಬಗ್ಗೆ ಅತ್ಯಂತ ಗೌರವವಿದೆ. ಸಂಘಟನೆ,ಶಿಸ್ತಿಗೆ ಕಾಫಿಬೆಳೆಗಾರರು ಹೆಸರುಪಡೆದಿದ್ದಾರೆ ಎಂದರು.
ಅರಕಲಗೂಡು ಶಾಸಕ ಎ.ಮಂಜು ಮಾತನಾಡಿ, ಕಾಫಿ ಬೆಳೆಗಾರರು ಇಂದು ಸಂಕೀರ್ಣವಾದ ಸಮಸ್ಯೆಯಲ್ಲಿ ಸುಳಿಯಲ್ಲಿ ಸಿಲುಕಿದ್ದು ಬೆಳೆಗಾರರು ಉಳಿದು ಬೆಳೆಯಲು ಕಾಫಿ ಬೆಳೆಯಲ್ಲಿ ಸಹಕಾರ ಪದ್ದತಿಆಳವಡಿಸಿಕೊಳ್ಳುವುದು ಇಂದಿನ ಅತ್ಯಂತ ತುರ್ತು ಅಗತ್ಯವಿದೆ. ಒತ್ತುವರಿ ಭೂಮಿ ಗುತ್ತಿಗೆ ನೀಡಲು ಸರ್ಕಾರ ಸಿದ್ದವಿದ್ದು ಈ ಬಗ್ಗೆ ಮಾತುಕತೆ ಸರ್ಕಾರದ ಮಟ್ಟದಲ್ಲಿ ನಡೆಯುತ್ತಿದೆ ಎಂದರು.
ಶಾಸಕ ಸಿಮೆಂಟ್ ಮಂಜು ಮಾತನಾಡಿ, ಬಲಿಷ್ಠ ಸಂಘಟನೆಯಿAದ ಮಾತ್ರ ಸಮಸ್ಯೆ ಪರಿಹರಿಸಿಕೊಳ್ಳ ಬಹುದಾಗಿದೆ. ಈ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿರುವ ಹಾಸನ ಜಿಲ್ಲಾ ಬೆಳೆಗಾರರ ಸಂಘ ಇತರರಿಗೆ ಮಾದರಿಯಾಗಿದೆ. ಇಂದು ಕಾಡಾನೆ,ಅತಿವೃಷ್ಟಿ,ಅನಾವೃಷ್ಟಿ,ಕಾರ್ಮಿಕರ ಕೊರತೆ ಸೇರಿದಂತೆ ಹಲವು ಸಮಸ್ಯೆಗಳ ನಡುವೆ ನಲುಗುತ್ತಿರುವ ಬೆಳೆಗಾರರ ನೆರವಿಗೆ ಸರ್ಕಾರ ಬರಬೇಕು ಎಂದರು.
ಹಾಸನ ಜಿಲ್ಲೆ ಕಾಫಿಬೆಳೆಗಾರರ ಸಂಘದ ಅಧ್ಯಕ್ಷ ಸುಬ್ರಮಣ್ಯ ಮಾತನಾಡಿ,ಆರೋಗ್ಯ ಪೇಯವಾದ ಕಾಫಿಯನ್ನು ಹೆಚ್ಚಿನ ಬಳಕೆ ಮಾಡುವುದರಿಂದ ಮಾತ್ರ ಕಾಫಿಗೆ ಮತ್ತಷ್ಟು ಮಾರುಕಟ್ಟೆ ಸೃಷ್ಟಿಸಬಹುದಾಗಿದೆ. ಸದ್ಯ ಕಾಫಿಗೆ ಉತ್ತಮ ಧರವಿದೆ ಅದೇತರಹ ನಿರ್ವಹಣೆ ವೆಚ್ಚ ಸಹ ಅಧಿಕವಾಗುತ್ತಿದೆ. ಹತ್ತಾರು ಸಮಸ್ಯೆಗಳ ನಡುವೆ ನಲುಗುತ್ತಿರುವ ಕಾಫಿ ಬೆಳೆಗಾರ ಪರವಾಗಿ ನಿರಂತರವಾಗಿ ಹಾಸನ ಜಿಲ್ಲಾ ಬೆಳೆಗಾರರ ಸಂಘ ಹೋರಾಟ ನಡೆಸುತ್ತಿದೆ ಎಂದರು.
ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ ದಿನೇಶ್,ವಿಭಿನ್ನ ರೋಗಗಳಿಗೆ ಕಾಫಿ ಉತ್ತಮ ಔಷದ ಎಂಬುದನ್ನು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಇದರಿಂದಾಗಿ ಕಾಫಿಗೆ ಮತ್ತಷ್ಟು ಕಾಫಿ ಮಾರುಕಟ್ಟೆ ಸೃಷ್ಟಿಯಾಗುವುದು ನಿಶ್ಚಿತ. ಆದ್ದರಿಂದ, ಕಾಫಿ ಬೆಳೆಗೆ ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯವಿದೆ ಎಂದರು. ಮಣ್ಣನ್ನು ಅರಿತ ರೈತರು ಮಾತ್ರ ಯಶಸ್ಸುಗೊಳ್ಳಲು ಸಾಧ್ಯ. ಆದ್ದರಿಂದ, ಯಾವುದೆ ಬೆಳೆ ಬೆಳೆಯುವ ಮುನ್ನ ಮಣ್ಣು ಪರೀಕ್ಷೆ ನಡೆಸ ಬೇಕು ಎಂದರು. ಕಾಫಿ ಮಂಡಳಿ ಕಾಫಿಬೆಳೆಗಾರರ ಹಿತಕಾಪಾಡಲು ಹಲವು ಯೋಜನೆಗಳನ್ನು ಹಾಕಿಕೊಂಡಿದೆ ಎಂದರು.
ಕಾಫಿ ಮಂಡಳಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಮಾತನಾಡಿ, ದೇಶದ ರೋಬಸ್ಟ್ ಕಾಫಿ ಪ್ರಪಂಚದಲ್ಲೆ ಅತ್ಯಂತ ಉತ್ತಮ. ಆದರೆ, ಇಷ್ಟೊಂದು ಉತ್ತಮ ಕಾಫಿ ಬೆಳೆಯುವುದು ಹೊರದೇಶಗಳಿಗೆ ತಿಳಿದಿಲ್ಲ. ನಾವು ವಿದೇಶಗಳಲ್ಲಿ ನಮ್ಮ ಕಾಫಿ ವಿಶೇಷತೆಯ ಬಗ್ಗೆ ಹೆಚ್ಚಿನ ಪ್ರಚಾರ ನೀಡುವುದರಿಂದ ಕಾಫಿಗೆ ಉತ್ತಮ ಮಾರುಕಟ್ಟೆ ಸೃಷ್ಟಿಯಾಗಲಿದೆ. ಈ ನಿಟ್ಟಿನಲ್ಲಿ ಕೆಲಸ ಮಾಡುವ ಅಗತ್ಯವಿದೆ ಎಂದರು.
ಕಾಫಿಮಂಡಳಿ ಮುಂದಿನ 10 ವರ್ಷದಲ್ಲಿ ಕಾಫಿಕೃಷಿಯನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಿದ್ದು ನಿಶ್ಚಿತವಾಗಿ ಕಾಫಿ ಬೆಳೆಗಾರರ ಸಮೂಹಕ್ಕೆ ಅನುಕೂಲವಾಗಲಿದೆ ಎಂದರು.
ವೇದಿಕೆಯಲ್ಲಿ ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಎಚ್.ಟಿ ಮೋಹನ್‌ಕುಮಾರ್,ಭಾರತೀಯ ಸಂಭಾರ ಮಂಡಳಿ ಉಪಾಧ್ಯಕ್ಷ ಸತ್ಯನಾರಯಣ.ಕಾಫಿ ಮಂಡಳಿ ಸದಸ್ಯರಾದ ಬಿ.ಕೆ ಕುಮಾರ್,ಎನ್.ಭಿ ಉದಯ್‌ಕುಮಾರ್,ಹೊಂಕರವಳ್ಳಿಧರ್ಮರಾಜ್ ಮುಂತಾದವರಿದ್ದರು.
ಈ ವೇಳೆ ಕರ್ನಾಟಕ ಬೆಳೆಗಾರರ ಒಕ್ಕೋಟದ ಮಾಜಿ ಅಧ್ಯಕ್ಷ ಡಾ. ಎಚ್.ಟಿ ಪ್ರದೀಪ್ ಅವರನ್ನು ಗೌರವಿಸಲಾಯಿತು.
ಅಚ್ಚನಹಳ್ಳಿಸುಜೇತನ ಎಂಬುವವರು ಬರೆದಿರುವ ಕಾಡುಕಾಫಿ ಎಂಬ ಪುಸ್ತಕ ಬಿಡುಗಡೆಮಡಲಾಯಿತು.
ಕಾರ್ಯಕ್ರಮದಲ್ಲಿ ಆಧುನೀಕ ತಂತ್ರಜ್ಞಾನದ ಅವಿಷ್ಕಾರಗಳನೊಳಗೊಂಡ ಸ್ಟಾಲ್‌ಗಳು ಬೆಳೆಗಾರರ ಗಮನ ಸೇಳೆದವು.6 ಎಸ್‌ಕೆಪಿಪಿ 1 ಹಾಸನ ಜಿಲ್ಲೆ ಬೆಳೆಗಾರರ ಸಂಘ ಹಮ್ಮಿಕೊಂಡಿದ್ದ ಕಾಫಿ ವಿತ್ ಡಾಕ್ಟರ್ ಎಂಬ ಕಾಫಿ ಸಮ್ಮೇಳನ ಉದ್ಘಾಟಿಸಿದ ಡಾ ಸಿ.ಎನ್ ಮಂಜುನಾಥ್ ಉದ್ಘಾಟಿದರು.
ಈ ವೇಳೆ ಶಾಸಕ ಎ.ಮಂಜು,ಸುಬ್ರಮಣ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.









