
ಸಕಲೇಶಪುರ : ತಾಲೂಕಿನ ಕ್ಯಾನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುಲ್ಲಹಳ್ಳಿ ಗ್ರಾಮದ ಲಕ್ಷ್ಮಿ ಬಿನ್ ರಾಜು ರವರ ವಾಸದ ಮನೆ, ಸುಮಾರು 8 ರಿಂದ10 ಅಡಿ ಎತ್ತರ ಪ್ರದೇಶದಲ್ಲಿದ್ದು, ಗೆರೆ ಪ್ರತಿ ಸಾರಿ ಮಳೆಯಲ್ಲಿ ಕುಸಿಯುತ್ತಿದೆ, ಕಳೆದ ಬಾರಿ ಗೆರೆ ಹೆಚ್ಚಿನ ಪ್ರಮಾಣದಲ್ಲಿ ಒಂದೇ ಬಾರಿ ಕುಸಿತ ಪರಿಣಾಮ ಮನೆ ಬಿರುಕು ಬಿಟ್ಟಿರುವ ಸ್ಥಿತಿಯಲ್ಲಿದೆ. ಈ ಬಾರಿ ಮಳೆಗಾಲದಲ್ಲಿ ಮನೆಯಲ್ಲಿ ವಾಸ ಮಾಡಲು ಕಷ್ಟಕರವಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ಹಾಗೂ ಶಾಸಕರಿಗೆ ತಡೆಗೋಡೆ ನಿರ್ಮಿಸಲು ಮನವಿ ಸಲ್ಲಿಸಲಾದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಲಕ್ಷ್ಮಿ ದೂರಿರುತ್ತಾರೆ.
ಮಾಜಿ ಗ್ರಾಮ ಪಂಚಾಯತಿ ಸದಸ್ಯರಾದ ಶಿವು ಮಾತನಾಡಿ ಮಳೆ ಯಿಂದಾಗಿ ಗೆರೆ ಕುಸಿದ ಪರಿಣಾಮ ಮುಂದಿನ ಮಳೆಯಲ್ಲಿ ಮನೆ ಬೀಳುವ ಸ್ಥಿತಿಯಲ್ಲಿದ್ದು ಸಂಬಂಧಪಟ್ಟ ಗ್ರಾಮ ಪಂಚಾಯತಿ ಹಾಗೂ ತಾಲೂಕ್ ಪಂಚಾಯತಿ ಅಧಿಕಾರಿಗಳು, ಹಾಗೂ ಶಾಸಕರು ಗಮನಹರಿಸಿ ತಡೆಗೋಡೆ, ಹಾಗೂ ಗ್ರಾಮದ ಕುಡಿಯುವ ನೀರು, ಡ್ರೈನೇಜ್ ವ್ಯವಸ್ಥೆ ನಿರ್ಮಿಸಿ ಕೊಡಬೇಕಾಗಿ ಆಗ್ರಹಿಸಿದ್ದಾರೆ.
ಇದೆ ಸಂದರ್ಭದಲ್ಲಿ ಡಿಎಸ್ಎಸ್ ನಗರ ಸಂಚಾಲಕರಾದ ಉದಯ್ ಕುಮಾರ್ ರಾಗಿಪುರ ಹಾಜರಿದ್ದು ಕೂಡಲೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಮುಂದೆ ಆಗುವಂತಹ ಅನಾಹುತ ತಪ್ಪಿಸಲು ತಡೆಗೋಡೆ ನಿರ್ಮಿಸಿ ಈ ಬಡ ಸಮುದಾಯಕ್ಕೆ ಮತ್ತು ಗ್ರಾಮದ ಜನರಿಗೆ ಅನುಕೂಲವಾಗುವಂತೆ ಮಾಡಿಕೊಡಬೇಕಾಗಿ ತಿಳಿಸಿರುತ್ತಾರೆ.



