
ಅಯೋಧ್ಯೆಯಿಂದ ಬಂದಿರುವ ಮಂತ್ರಕ್ಷತೆ ವಿತರಣೆ..!!!
ಸಕಲೇಶಪುರ : ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವತಿಯಿಂದ ಸಕಲೇಶಪುರದ ಲಕ್ಷ್ಮೀಪುರಂ ಬಡಾವಣೆ ಮತ್ತು ರೈಲ್ವೆ ಕ್ವಾಟ್ರಸ್ ಗೆ ಮಂತ್ರಕ್ಷತೆ ವಿತರಣೆ.
ಉತ್ತರಭಾರತದವರೇ ಅತಿಹೆಚ್ಚು ಇರುವ ರೈಲ್ವೆ ಬಡಾವಣೆಯಲ್ಲಿ ಉತ್ತರಪ್ರದೇಶ, ಬಿಹಾರ್, ರಾಜಸ್ಥಾನ ಮೂಲದವರು ಹಿಂದಿ ಭಾಷಿಕರು ಹೆಚ್ಚಿದ್ದು. 22.01.24 ರಂದು ರಾಮಜನ್ಮಸ್ಥಾನದಲ್ಲಿ ರಾಮಮಂದಿರ ಪ್ರಾಣಪ್ರತಿಷ್ಠಾಪನೆ ದಿನದಂದು 12.30 ಕ್ಕೆ ಉತ್ತರ ದಿಕ್ಕಿಗೆ ಮುಖಮಾಡಿ ಮಂತ್ರಕ್ಷತೆ ತಲೆ ಮೇಲೆ ಹಾಕಬೇಕು ಮತ್ತು ಸಂಜೆ 5 ಕ್ಕೂ ಹೆಚ್ಚು ದೀಪ ಹಚ್ಚಬೇಕು ಎಂದಾಗ ಮಾತೆಯರು ಹರ್ಷ ವ್ಯಕ್ತಪಡಿಸಿ ಹಮ್ ದೀಪಾವಳಿ ಮನಾಯೇಂಗೆ ಎಂದು ಹೇಳಿದ್ದು ಮಂತ್ರಕ್ಷತೆ ವಿತರಕರಿಗೆ ಖುಷಿ ತಂದಿತು.
ವಿವಿಧ ಪಕ್ಷದ ರಾಜಕೀಯ ಮುಖಂಡರಿಗೂ ಮಂತ್ರಕ್ಷತೆ ತಲುಪಿಸಲಾಯಿತು.
ಈ ಸಂದರ್ಭದಲ್ಲಿ ಬಜರಂಗದಳ ಜಿಲ್ಲಾ ಸಹ ಸಂಯೋಜಕ ಕೌಶಿಕ್, ಕ್ಯಾಮನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಸಚಿನ್, ರೈಲ್ವೆ ಸಿಬ್ಬಂದ್ದಿಗಳಾದ ನವೀನ, ಪ್ರದೀಪ,ಬಾಬ, ಜಸ್ವಂತ್, ಮಿಥುನ್, ಸಂತೋಷ್, ಬಿಜೆಪಿ ಮುಖಂಡರಾದ ದುಷ್ಯಂತ್ ಗೌಡ, ಶೇಖರ್ ಕಬ್ಬಿನಗದ್ದೆ ಹಾಗು ಮಾತೆಯರಾದ ಮಂಜುಶ್ರೀ ಪ್ರದೀಪ್ ಮತ್ತು ಶಿಲ್ಪ ಕಿರಣ್ ಉಪಸ್ಥಿತಿ ಇದ್ದರು










