ಹಾಸನ: ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಅಡಿಯಲ್ಲಿ ಬರುವ ಕೃಷಿ ಮಹಾವಿದ್ಯಾಲಯ, ಕಾರೇಕೆರೆ, ಹಾಸನದ ವತಿಯಿಂದ ಆಯೋಜಿಸಲಾದ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ 2023-24ರ ಅಂಗವಾಗಿ ಅಂತಿಮ ವರ್ಷದ ಕೃಷಿ ವಿದ್ಯಾರ್ಥಿಗಳಿಂದ ದೊಡ್ದಯರಗನಾಳು ಗ್ರಾಮದಲ್ಲಿ ‘ಹಸುವಿನ ಕಾಲು ಬಾಯಿ ಜ್ವರದ ನಿಯಂತ್ರಣದ ಬಗ್ಗೆ ಅರಿವು’ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಪ್ರಮೋದ್ ಜೆ.ಕೆ , ಪಶು ಶಸ್ತ್ರ ಚಿಕಿತ್ಸಾ ತಜ್ಞರು, ಪಶುವೈದ್ಯಕೀಯ ವಿಭಾಗ, ದಂಡಿಗನಹಳ್ಳಿ, ಚನ್ನರಾಯಪಟ್ಟಣ ಇವರು ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ರಾಸುಗಳಲ್ಲಿ ಕಂಡುಬರುವ ಕಾಲು ಬಾಯಿ ಜ್ವರದ ಲಕ್ಷಣಗಳು ಹಾಗೂ ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರು ಹಾಗು ಈ ರೋಗಗಳು ವೈರಸ್ ನಿಂದ ಹರಡುವ ಸಾಂಕ್ರಮಿಕ ರೋಗವಾಗಿದೆ ಎಂದು ತಿಳಿಸಿದರು.

ರೋಗದ ನಿಯಂತ್ರಣ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು ಹಾಗೂ ರಾಸುಗಳ ಬೆಳವಣಿಗೆಗೆ ಆರೋಗ್ಯಕರ ವಾತಾವರಣ ಅತ್ಯಗತ್ಯವೆಂದು ತಿಳಿಸಿದರು. ಸೂಕ್ತ ಸಮಯದಲ್ಲಿ ಲಸಿಕೆಗಳನ್ನು ನೀಡುವುದು ಮುಖ್ಯವೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಅನೇಕ ಸಂಖ್ಯೆಯಲ್ಲಿ ಗ್ರಾಮದ ರೈತರು ಹಾಜರಿದ್ದು ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *