
ಅಯೋಧ್ಯೆಯಿಂದ ಬಂದಿರುವ ಮಂತ್ರಕ್ಷತೆ ವಿತರಣೆ ಸಕಲೇಶಪುರದ ಬೈಕೆರೆ ಬಳಿ ಇರುವ ಅಶೋಕನಗರದಲ್ಲಿ..
ಅಯೋಧ್ಯೆಯಿಂದ ಬಂದಿರುವ ಮಂತ್ರಕ್ಷತೆ ವಿತರಣೆ ಮಾಡಲು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಕಾರ್ಯಕರ್ತರು ಹೋದಾಗ ಸಕಲೇಶಪುರದ ಬೈಕೆರೆ ಬಳಿ ಇರುವ ಅಶೋಕನಗರದ ಮಹಿಳೆಯರು ಆರತಿ ಮಾಡಿ ಅಭೂತಪೂರ್ವ ಸ್ವಾಗತಿಸಿದರು.
ಸಾಕ್ಷಾತ್ “ರಾಮನ ಮಂತ್ರಕ್ಷತೆಯನ್ನು ಬಣ್ಣಿಸಿದ್ದು ಹೀಗೆ *ಶಬರಿ ರಾಮನ ಬರುವಿಕೆಗೆ ಕಾಯುತ್ತ ಇದ್ದ ಹಾಗೆ ಮಂತ್ರಕ್ಷತೆಯೆ ನಮಗೆ ರಾಮ ಎಂದು ಮಹಿಳೆಯರು ಖುಷಿ ಪಟ್ಟಿದ್ದು ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು*
ಪ್ರತಿ ಮನೆಯಲ್ಲೂ ವಿಶೇಷವಾದ ಸ್ವಾಗತ ಮಾಡಿ ವಿಶೇಷ ಆತಿಥ್ಯ ನೀಡಿ ಮಂತ್ರಕ್ಷತೆಗೆ ಗೌರವಿಸಿದ್ದು ಪೂಜಿಸಿದ್ದು ಮಂತ್ರಕ್ಷತೆ ವಿತರಕರಿಗೆ ಪ್ರೇರಣೆ ಆಯಿತು.
ಅಶೋಕನಗರದ ಎಲ್ಲ ಗ್ರಾಮಸ್ಥರು ಒಂದೆಡೆ ಸೇರಿ ರಾಮಮಂದಿರ ಬಗ್ಗೆ ಮತ್ತು ಗ್ರಾಮದ ಸಮಸ್ಯೆ ಬಗ್ಗೆ ಚರ್ಚೆ ಮಾಡಿ ಚಹಾ ಸವೆದಿದ್ದು ಕಾರ್ಯಕರ್ತರಿಗೆ ಖುಷಿ ತಂದಿತು.
ಈ ಸಂದರ್ಭದಲ್ಲಿ ಅಶೋಕನಗರದ ಗ್ರಾಮಸ್ಥರಾದ ಗೀತಾ, ಮಂಜುಳಾ, ಗಂಗಮ್ಮ, ಯಶೋದಮ್ಮ, ಕಾಳಮ್ಮ , ಸೀತೆ, ಈರಮ್ಮ, ದೀಪಿಕಾ ಬೈಕೆರೆ, ರತ್ನ ಅಶೋಕನಗರ, ಪುಟ್ಟ, ದೊಡ್ಡಯ್ಯ, ವೆಂಕಟೇಶ್, ಪುನೀತ್ ರಘು ಸಕಲೇಶಪುರ, ದುಷ್ಯಂತ್ ಗೌಡ, ಶೇಖರ್ ಕಬ್ಬಿನಗದ್ದೆ, ಸಂತೋಷ್, ಸಚಿನ್ ಬಾಲ್ಯಹಳ್ಳ ಉಪಸ್ಥಿತಿ ಇದ್ದರು








