
10 /1/ 2024 ರಂದು ಎಪಿಎಂಸಿ ಆವರಣ ಗಂಡಸಿ ಎಚ್ ಪಿ ಅರಸೀಕೆರೆ ತಾಲೂಕಿನಲ್ಲಿ ಕೃಷಿ ವಸ್ತು ಪ್ರದರ್ಶನ ಹಾಗೂ ರೈತರೊಂದಿಗೆ ಸಂವಾದ ನಡೆಯಲಿದ್ದು ಕೃಷಿ ಹಾಗೂ ಕೃಷಿ ಸಂಬಂಧಿತ ಇಲಾಖೆಗಳು ಮತ್ತು ಪ್ರೈವೇಟ್ ಸಂಸ್ಥೆಗಳ ಸುಮಾರು 100 ಮಳಿಗೆಗಳು ಭಾಗವಹಿಸಲಿವೆ.
ಈ ವಸ್ತು ಪ್ರದರ್ಶನದಲ್ಲಿ ಈ ಭಾರಿ ಸಿರಿಧಾನ್ಯದ 15 ಮಳಿಗೆಗಳು ಇದ್ದು ಸುಮಾರು 3000 ರೈತರು ಭಾಗವಹಿಸಲಿದ್ದು ಆಸಕ್ತ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕೇಳಿ ಕೊಳ್ಳುತ್ತೇವೆ.
ಈ ವಸ್ತು ಪ್ರದರ್ಶನಕ್ಕೆ ಮುಖ್ಯ ಅತಿಥಿಗಳಾಗಿ ಸನ್ಮಾನ್ಯ ಶ್ರೀ ಕೆಎಂ ಶಿವಲಿಂಗೇಗೌಡ ಮಾನ್ಯ ಶಾಸಕರು ಅರಸಿಕೆರೆ ವಿಧಾನಸಭಾ ಕ್ಷೇತ್ರ ಡಾ .ಎಸ್ ವಿ ಸುರೇಶ್ ಗೌರವಾನ್ವಿತ ಕುಲಪತಿಗಳು ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು ,ಡಾ ನಾರಾಯಣಸ್ವಾಮಿ ಕೆ ಎಸ್ ಸಿ ಶಿಕ್ಷಣ ನಿರ್ದೇಶಕರು ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು ಡಾ. ಎಂ ಸಿ ಶಿವಕುಮಾರ್ ಪಶು ವೈದ್ಯಕೀಯ ಮಹಾವಿದ್ಯಾಲಯ ಹಾಸನ ಡಾ. ನಿತಿನ್ ಎಸ್.ಎ ಪ್ರಾಂಶುಪಾಲರು ರಾಜೀವ್ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಹಾಸನ, ಡಾ ಎಸ್ ಎನ್ ವಾಸುದೇವ ಕೃಷಿ ಮತ್ತು ಆವರಣ ಮುಖ್ಯಸ್ಥರು ಕೃಷಿ ಮಹಾವಿದ್ಯಾಲಯ ಕಾರೆಕೆರೆ ಹಾಸನ, ಶ್ರೀಮತಿ ರಾಜಸುಲೋಚನಾ ಎಂ ಎನ್ ಜಂಟಿ ಕೃಷಿ ನಿರ್ದೇಶಕರು ಕೃಷಿ ಇಲಾಖೆ , ಶ್ರೀಮತಿ ಮಂಗಳ ಉಪ ನಿರ್ದೇಶಕರು ತೋಟಗಾರಿಕೆ ಇಲಾಖೆ ಹಾಸನ ಭಾಗವಹಿಸಲಿದ್ದಾರೆ
