
*ಆಹಾರ ಧಾನ್ಯಗಳ ಶೇಖರಣಾ ವಿಧಾನಗಳು*
ಹಾಸನದ ಕಾರೇಕೆರೆಯ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ಬಿ.ಟೆಕ್ ಆಹಾರ ತಂತ್ರಜ್ಞಾನ ವಿದ್ಯಾರ್ಥಿಗಳು ಹಾಗೂ ಅಂತಿಮ ವರ್ಷದ ಬಿ. ಎಸ್ಸಿ ಕೃಷಿ ವಿಧ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ 2023-24 ರ ಅಂಗವಾಗಿ ಅರಸೀಕೆರೆ ತಾಲ್ಲೂಕು ಗಂಡಸಿ ಹೋಬಳಿಯ ಕುಡುಕುಂದಿ ಗ್ರಾಮದಲ್ಲಿ *ಆಹಾರ ಧಾನ್ಯಗಳ ಶೇಖರಣಾ ವಿಧಾನಗಳು* ಕುರಿತು ಮಾಹಿತಿ ನೀಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಆಹಾರ ಧಾನ್ಯಗಳ ಶೇಕರಣ ಅಭ್ಯಾಸಗಳು, ಕೊಯ್ಲು ಮಾಡಿದ ಧಾನ್ಯಗಳನ್ನು ಕೀಟಗಳು , ಹಾಲಗುವಿಕೆ ಮತ್ತು ಪರಿಸರ ಪರಿಸ್ಥಿತಿಗಳoತಹ ಅಂಶಗಳಿಂದ ಸಂರಕ್ಷಿಸಲು ಮತ್ತು ಸಂರಕ್ಷಿಸಲು ಬಳಸುವ ವಿಧಾನಗಳನ್ನು ಮತ್ತು ತಂತ್ರಗಳನ್ನು ಉಲ್ಲೇಖಿಸುತ್ತದೆ.
ಅವುಗಳ ದೀರ್ಘಕಾಲೀನ ಗುಣಮಟ್ಟ , ಪೌಷ್ಟಿಕಾಂಶದ ಮೌಲ್ಯ ಮತ್ತು ಬಳಕೆ, ವ್ಯಾಪಾರ, ಲಭ್ಯತೆ, ಮತ್ತು ವಿತರಣೆಯನ್ನು ಖಚಿತಪಡಿಸುತ್ತದೆ.
ಉತ್ತಮ ಶೇಖರಣಾ ರಚನೆಯ ಅವಶ್ಯಕತೆಗಳೆಂದರೆ: * ಸರಿಯಾದ ಸ್ವ ಚತೆ ಕಾಪಾಡುವುದು* ಸುಲಭ ತಪಾಸಣೆಗೆ ಅನುಮತಿ ನೀಡುವಂತಿರಬೇಕು. *ತೇವಾಂಶ ಮತ್ತು ತಾಪಮಾನ ನಿಯಂತ್ರಣ ಗ್ರಾಮದಲ್ಲಿ ರಾಗಿಯು ಪ್ರಮುಖ ಬೆಳೆಯಾಗಿದ್ದು, ಗ್ರಾಮದ ಜನರಿಗೆ ವಿಷೇಷವಾಗಿ, ರಾಗಿ ಧಾನ್ಯಗಳ ಸುರಕ್ಷಿತ ಶೇಖರಣೆ ಬಗ್ಗೆ ಮಾಹಿತಿ ನೀಡಲಾಯಿತು.
ಅದರಲ್ಲಿ ತಿಳಿಸಿಕೊಟ್ಟ ಪ್ರಮುಖ ಅಂಶಗಳೆಂದರೆ : ಬ್ಯಾಗ್ ಶೇಖರಣಾ ರಚನೆ-*ರಾಶಿಯಿಂದ ರಾಶಿಗೆ ಅಂತರ- 2 m*ಗೋಡೆಯಿಂದ ರಾಶಿಗೆ ಅಂತರ -0.8 mಹೀಗೆ ಧಾನ್ಯಗಳ ಸುರಕ್ಷಿತ ಶೇಖರಣೆ ಹಾಗೂ ಅವುಗಳಿಯಂದಾಗುವ ಲಾಭಗಳನ್ನು ಅರಿವು ಮೂಡಿಸಲಾಯಿತು.
ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಡಾ. ಅಭಿಲಾಶ ಪಿ. ಆಹಾರ ಇಂಜಿನಿಯರಿಂಗ್ ವಿಭಾಗ ಮಹಾವಿದ್ಯಾಲಯ ಹಾಸನ ಇವರು ಗ್ರಾಮದ ಜನರಿಗೆ ಕಾರ್ಯಕ್ರಮದ ಕುರಿತು ಹೆಚ್ಚಿನ ಮಾಹಿತಿ ನೀಡಿದರು.ಹಾಗೂ ಗ್ರಾಮದ ರೈತರಾದ ಲಕ್ಷಿ , ನಾಗರಾಜ್ ಮುಂತಾದವರು ಪಾಲ್ಗೊಂಡಿದ್ದರು .
