ಸಕಲೇಶಪುರ : ನೂತನ ಪಿಂಚಣಿ ಬೇಡ,ನೂತನ ಪಿಂಚಣಿ ಯೋಜನೆ ರದ್ದುಪಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೋಮವಾರದಿಂದ 4 ದಿನ ದಕ್ಷಿಣ ಪಶ್ಚಿಮ ರೈಲ್ವೆ ಮಜದೂರ್ ಯೂನಿಯನ್ನಿಂದ ನಗರದ ರೈಲ್ವೆ ನಿಲ್ದಾಣ ಮುಂಭಾಗ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

ಕೇಂದ್ರ ಸರ್ಕಾರ ನೂತನ ಪಿಂಚಣಿ ಯೋಜನೆಯನ್ನು ರದ್ದು ಮಾಡಿ,ಹಳೆಯ ಪಿಂಚಣಿ ಯೋಜನೆಯನ್ನು ಜಾರಿ ಮಾಡಬೇಕು , ರೈಲ್ವೆ ಇಲಾಖೆಯನ್ನು ಖಾಸಗಿಕರಣ ಮಾಡುವ ನಿರ್ಧಾರದಿಂದ ಹಿಂದೆ ಸರಿಯಬೇಕು. ಈಗಾಗಲೇ ದೇಶದ ಅನೇಕ ರೈಲ್ವೆ ನಿಲ್ದಾಣಗಳನ್ನು ಖಾಸಗಿ ಸುಪರ್ದಿಗೆ ನೀಡಲಾಗಿದೆ.

ಹಂತ ಹಂತವಾಗಿ ಎಲ್ಲಾ ವಿಭಾಗಗಳಲ್ಲೂ ಬಂಡವಾಳಶಾಹಿಗಳು ಕಾಲಿಡುತ್ತಿದ್ದಾರೆ ಇದರಿಂದ ನೌಕರರಿಗೆ ಅನ್ಯಾಯವಾಗುತ್ತಿದೆ.

ಹಳೆಯ ಪಿಂಚಣಿ ಯೋಜನೆಯಿಂದ ಮಾತ್ರ ನೌಕರರು ನೆಮ್ಮದಿಯಿಂದ ಬದುಕಬಹುದು, ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುವುದೆಂದರೆ ಸುದೈವ ಎಂಬ ಭಾವನೆಯಿದೆ. ಆದರೆ ಈಗಿನ ಸರ್ಕಾರ ಜಾರಿಗೆ ತರುತ್ತಿರುವ ಕಾನೂನುಗಳು ಭವಿಷ್ಯದ ಪೀಳಿಗೆಯ ಮೇಲೆ ದುಷ್ಪರಿಣಾಮ ಬೀರುತ್ತಿದೆ.

01/01/2004 ರಿಂದ ಸೇವೆಗೆ ಸೇರಿರುವ ನೌಕರರನ್ನು NPS ಗೆ ಸೇರಿಸಲಾಗಿದೆ. ಇದು ಸರ್ಕಾರದ ಅವೈಜ್ಞಾನಿಕ ಕ್ರಮವಾಗಿದೆ. ಸಿಬ್ಬಂದಿ ಕೊರತೆಯಿಂದ ಕೆಲಸದ ಒತ್ತಡವು ಹೆಚ್ಚುತ್ತಿದ್ದು, ಯಾರು ಕೂಡ ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಸರ್ಕಾರ ತನ್ನ ನಿರ್ಧಾರವನ್ನು ಪ್ರಕಟಿಸಲು ಗುರುವಾರದವರೆಗೆ ಗಡುವು ನೀಡಿದ್ದೇವೆ. ಬೇಡಿಕೆ ಈಡೇರದಿದ್ದರೆ ಪ್ರತಿಭಟನೆ ಮುಂದುವರೆಸುತ್ತೇವೆ.

SWRMU ಸಂಘದ ಪದಾಧಿಕಾರಿಗಳು :- ಬಾಬು, ಅಮಿತ್ ಕುಮಾರ್, ಯೋಗೇಶ್, ಗೋವಿಂದರಾಜು, ಮೋಹನ್ ಕುಮಾರ್, ಚಂದ್ರು, ಕಾರ್ತಿಕ್, ಸತೀಶ್ ಕುಮಾರ್

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *