
ಸಕಲೇಶಪುರ: ಪಟ್ಟಣದ ಅಚಿವೆರ್ಸ ಕಾಲೇನಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕುವೆಂಪು ರಚಿತ ಗೀತಗಾಯನ ಸ್ಪರ್ಧಾ ಕಾರ್ಯಕ್ರದಲ್ಲಿ ಮುಖ್ಯ ಅಥಿತಿ ಯಾಗಿ ಭಾಗವಹಿಸಿ ಮಾತನಾಡಿದ ಅವರು ಕುವೆಂಪುರವರು ತಾವು ಬರೆದಂತೆ ಆಡಿದ ಮಾತಿನಂತೆ ಬದುಕು ನಡೆಸಿ ರಸ ಋಷಿ ಯಾದರು.
ಅವರು ಯಾರನ್ನು ಒಲೈಸಲು ಬರೆಯುತ್ತ ಇರಲಿಲ್ಲ ಅವರ ಬರವಣಿಗೆ ಯಲ್ಲಿ ನೈಜತೆ ಇರುತಿತ್ತು. ವೈಜಾರಿಕ ಹಿನ್ನಲೆಯ ಯಲ್ಲಿ ಅವರು ರಚಿಸಿರುವ ಕೃತಿಗಳು ಇಂದಿಗೂ ಪ್ರಸ್ತುತ ಎನ್ನಿಸುತಿದೆ.
ಅವರು ಬರೆದ ಶ್ರೀ ರಾಮಾಯಣ ದರ್ಶನಂ ಮಾಹ ಕಾವ್ಯದಲ್ಲಿ ರಾವಣನಲ್ಲೂ ವಿಶೇಷ ವ್ಯಕ್ತಿತ್ವವನ್ನು ಗುರುತಿಸಿದ್ದಾರೆ.
ಕುವೆಂಪುರವರು ವಿಶ್ವದ ಕಂಡ ಕವಿಗಳಲ್ಲಿ ಶ್ರೇಷ್ಟ ಸಾಲಿನಲ್ಲಿ ನಿಲ್ಲುತ್ತಾರೆ.
ಕುವೆಂಪುರವರು ನೀಡಿದ ಸಂದೇಶ ವನ್ನು ನಾವು ಪಾಲಿಸುವುದರ ಮೂಲಕ ಅಲ್ಪ ಮಾನವರಾಗುವ ಬದಲು ವಿಶ್ವ ಮಾನವರಾಗ ಬೇಕು, ಅವರ ತತ್ವ ಹಾಗೂ ಚಿಂತನೆಗಳು ನಮಗೆ ಆದರ್ಶವಾಗ ಬೇಕು ಎಂದುರು. ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಶಾರದ ಗುರು ಮೂರ್ತಿ ಮಾತನಾಡಿ ಇಂದಿನ ವಿಧ್ಯಾರ್ಥಿಗಳ ಪ್ರತಿಭೆಯನ್ನು ಅನಾವರಣ ಗೊಳಿಸಲು ಇಂತಹ ಕಾರ್ಯಕ್ರಮಗಳನ್ನು ಸಾಹಿತ್ಯ ಪರಿಷತ್ ವತಿಯಿಂದ ನಡೆಸಲಾಗುತ್ತಿದೆ, ವಿಧ್ಯಾರ್ಥಿಗಳು ಚಿಕ್ಕಂದಿನಿಂದಲೇ ಹೆಚ್ಚು ಓದುವ ಹಾಗೂ ಬರೆಯುವ ಅಭ್ಯಾಸ ಬೆಳೆಸಿಕೊಳ್ಳುವ ಮೂಲಕ ಜ್ಷಾನ ವೃದ್ದಿಸಿಕೊಳ್ಳ ಬೇಕು ಎಂದು ಹೇಳಿದರು.
ಕುವೆಂಪು ರಚಿತ ಗೀತಗಾಯನ ಸ್ಪರ್ಧೆಯಲ್ಲಿ ಮೊದಲ ಬಹುಮಾನವನ್ನು ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಿಂಚನ ಎಸ್, ಎರಡನೇಯ ಬಹುಮಾನ ರಕ್ಷಿತ್ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಮೂರನೇ ಬಹುಮಾನ ವನ್ನು ಅಪ್ತರ್ ನಿಶಾ ಬಾಲಕಿಯರ ಸಕಾರಿ ಪದವಿ ಪೂರ್ವ ಕಾಲೇಜಿನ ವಿಧ್ಯಾರ್ಥಿಗಳು ಪಡೆದರು.
ತೀರ್ಪುಗಾರರಾಗಿ ಕರ್ನಾಟಕ ಬರಹಗಾರ ಸಂಘದ ತಾಲ್ಲೂಕು ಅಧ್ಯಕ್ಷ ವಿಶ್ವಾಸ್ ಗೌಡ ಹಾಗೂ ಕನ್ನಡ ಸಾಹಿತ್ಯ ಪರಿಷತ್‌ನ ಪ್ರತಿನಿಧಿ ಮಿನಾಕ್ಷಿ ಖಾದರ್ ರವರು ನೇರವೆರಿಸದರು
ಈ ಕಾರ್ಯಕ್ರಮದಲ್ಲಿ ಅಚಿವರ್ಸ ಕಾಲೇಜಿನ ಪ್ರಾಂಶುಪಾಲ ಜುಲ್ಪಿಕರ್, ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಜೈ ಭಿಮ್ ಮಂಜುನಾಥ್, ಕನ್ನಡ ಸಾಹಿತ್ಯ ಪರಿಷತ್ನ ಕಾರ್ಯದರ್ಶಿ ಯೊಗೇಶ್, ಖಜಾಂಜಿ ನಲ್ಲುಲ್ಲಿ ಸತೀಶ್. ಅಕ್ಬರ್ ಜುನೈದ್, ಅಶೋಕ್, ಹರೀಶ್ ಆಚಾರ್ ಮುಂತಾದವರು ಉಪಸ್ಥಿತರಿದ್ದರು
